ಪಾತಾಳಕ್ಕೆ ಕುಸಿದ ತೆಂಗಿನಕಾಯಿ ಬೆಲೆ: ಸಂಕಷ್ಟದಲ್ಲಿ ತೆಂಗು ಬೆಳೆಗಾರರು
ಕಾಸರಗೋಡು, ಮಾ.13: ತೆಂಗಿನ ಕಾಯಿ ಬೆಲೆ ಕುಸಿತದಿಂದಾಗಿ ಕಾಸರಗೋಡು ಜಿಲ್ಲೆಯ ತೆಂಗು ಬೆಳೆ ಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತೆಂಗಿನಿಂದ ಕಾಯಿ ಕೀಳಲು ಕಾರ್ಮಿಕನಿಗೆ ಪ್ರತಿ ತೆಂಗಿಗೆ 30 ರೂ. ನೀಡಬೇಕು. ತೆಂಗಿನ ಕಾಯಿ ಸುಲಿಯಲು 80 ಪೈಸೆ ನೀಡಬೇಕಿದೆ. ಆದರೆ ಒಂದು ಕಿಲೋ ಹಸಿ ತೆಂಗಿನಕಾಯಿ ಮಾರಾಟ ಮಾಡಿದರೆ ಬೆಳೆಗಾರರಿಗೆ ಈಗ ಸಿಗುವುದು 15.50 ರೂ. ಮಾತ್ರ.
ಒಂದು ವರ್ಷದ ಹಿಂದೆ ಹಸಿ ತೆಂಗಿನಕಾಯಿಗೆ 35 ರೂ. ತನಕ ಲಭಿಸುತ್ತಿತ್ತು. ಆದರೆ ಈಗ ಈ ದರ ಪಾತಾಳಕ್ಕಿಳಿದಿದೆ. ತೆಂಗಿನ ಕಾಯಿಗೆ ಬೇಡಿಕೆ ಕುಸಿದಿರುವುದು, ಕೂಲಿ, ಖರ್ಚು ಹೆಚ್ಚಾಗಿರುವುದರಿಂದ ಬೆಳೆ ಗಾರರು ದಿಕ್ಕು ತೋಚದಂತಾಗಿದ್ದಾರೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ತೆಂಗಿನಕಾಯಿಯ ಬೆಲೆ ಗಗನಕ್ಕೇರಿತ್ತು. ಈ ಸಮಯದಲ್ಲಿ ಬೆಳೆಗಾರರು ತೆಂಗಿನತ್ತ ಹೆಚ್ಚು ಒಲವು ತೋರಿದ್ದರು. ಇದೀಗ ಕುಸಿಯುತ್ತ ಬಂದಿದ್ದ ಈ ಬೆಲೆ ಕೆಲದಿನಗಳಿಂದ 20 ರೂ.ನ ಆಸುಪಾಸು ತಲುಪಿತ್ತು. ಆದರೆ ರವಿವಾರದ ವೇಳೆಗೆ ಈ ದರವು 15 ರೂ.ಗೆ ಬಂದು ನಿಂತಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಕುಸಿಯಲಿದೆ ಎಂಬ ಮಾತು ಕೇಳಿಬರುತ್ತಿದೆ. ಉತ್ಪಾದನಾ ವೆಚ್ಚ ಹೆಚ್ಚಳ: ಕಳೆದ ಕೆಲವು ವರ್ಷಗಳಲಿ್ಲ ಕಾರ್ಮಿಕರ ದುಬಾರಿ ಕೂಲಿ, ಕಾಂಡ ಹುಳ ಬಾಧೆ ಸೇರಿದಂತೆ ಇನ್ನಿತರ ರೋಗಗಳ ಹಾವಳಿ ಯಿಂದ ತೆಂಗಿನ ಇಳುವರಿ ಅರ್ಧದಷ್ಟು ಕುಸಿದಿತ್ತು. ಆದರೆ ಉತ್ತಮ ದರ ಲಭಿ ಸುತ್ತಿದ್ದುದರಿಂದ ಬೆಳೆಗಾರರು ನಿಟ್ಟಿಸಿರು ಬಿಡುವಂತಾಗಿತ್ತು. ಆದರೆ ಈಗ ಇಳು ವರಿಯೂ ಇಲ್ಲ, ಸೂಕ್ತ ಬೆಲೆಯೂ ಇಲ್ಲದೆ ತೆಂಗು ಬೆಳೆಗಾರರು ಅತಂತ್ರ ರಾಗಿದ್ದಾರೆ.