ಪುರುಷರ ಖೋ ಖೋ: ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ತಂಡಕ್ಕೆ ಪ್ರಶಸ್ತಿ
Update: 2016-03-14 13:12 IST
ಮಂಗಳೂರು, ಮಾ.14: ಬೆಂಗಳೂರಿನ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಮಾ. 11ರಿಂದ 13ರ ವರೆಗೆ ಜರುಗಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಅಂತರ್ ವಲಯ ಪುರುಷರ ಖೋ ಖೋ ಪಂದ್ಯಾಟದಲ್ಲಿ ಮೂಡುಬಿದಿರೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ತಂಡವು ಚಾಂಪಿಯನ್ ಶಿಪ್ ಪಡೆದಿದೆ.