×
Ad

ಕದ್ರಿ ಪಾರ್ಕ್ ನಲ್ಲಿ ಮರಗಳ ಮಾರಣ ಹೋಮ- ಪರಿಸರಾಸಕ್ತರಿಂದ ವಿರೋಧ

Update: 2016-03-14 14:53 IST

ಕದ್ರಿ ಪಾರ್ಕ್ ಎದುರಿನ ತೋಟಗಾರಿಕಾ ಇಲಾಖೆಗೆ ಸೇರಿದ ಜಿಂಕೆ ಉದ್ಯಾನವನದ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿದ ಸಂಗೀತ ಕಾರಂಜಿಗಾಗಿ ನೂರಾರು ದೊಡ್ಡ-ದೊಡ್ಡ  ಮರಗಳನ್ನು ಇಲಾಖೆಯ ಅನುಮತಿ ಇಲ್ಲದೇ  ಕಡಿದಿದ್ದು, ಇದನ್ನು ವಿರೋಧಿಸಿ ರಾಷ್ಟೀಯ ಪರಿಸರ ಸಂರಕ್ಷಣಾ ಒಕ್ಕೂಟದ ವತಿಯಿಂದ ಇಂದು ಪ್ರತಿಭಟನೆ  ನಡೆಯಿತು.

ಮಂಗಳೂರಿನಲ್ಲಿ ಮರಗಳು ಇರುವಂತಹ ಜಾಗ ಎಂದರೆ ಅದು ಕದ್ರಿ ಪಾರ್ಕ್, ಇಲ್ಲಿ ಜನ ಬರುವುದು ಶುದ್ಧ ಆಮ್ಲಜನಕ ಸೇವಿಸಲು, 
ನಮ್ಮ ಶಾಸಕರು ಈ ಜಾಗದಲ್ಲಿ ಇರುವ ನೂರಾರು ಮರಗಳನ್ನು ಕಡಿಸಿ, ಸಂಗೀತ ಕಾರಂಜಿ ಮಾಡಲು ಹೊರಟಿರುವುದು ಯಾರ ಉದ್ಧಾರಕ್ಕಾಗಿ ಎಂದು ಅರ್ಥ ಆಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News