×
Ad

ಮಂಗಳೂರು ನಗರ ಶಸಸ್ರ್ತ ಪೊಲೀಸ್ ಪಡೆಗೆ ಆಯ್ಕೆ

Update: 2016-03-14 15:25 IST

ಮಂಗಳೂರು, ಮಾ.14: ಇಂದಿನಿಂದ ಮಂಗಳೂರು ನಗರ ಶಸಸ್ರ್ತ ಪೊಲೀಸ್ ಪಡೆಗೆ ನಗರದ ಮಂಗಳಾ ಕ್ರೀಡಾಂಗಣದಲ್ಲಿ  ಆಯ್ಕೆ ಪರೀಕ್ಷೆ ಇಂದಿನಿಂದ ಆರಂಭಗೊಂಡಿದೆ.

ಇದು 56 ದಿನಗಳ ಕಾಲ ಈ ಶಿಬಿರ ನಡೆಯಲಿದೆ ಎಂದು ಪೊಲೀಸ್ ಅಧಿಕಾರಿ ಮದನ್ ತಿಳಿಸಿದ್ದಾರೆ. ಸುಮಾರು 27,700 ಅರ್ಜಿಗಳು ಬಂದಿರುವುದಾಗಿ ಅವರು ತಿಳಿಸಿದ್ದಾರೆ. 

ಪ್ರತಿದಿನ 750 ಮಂದಿಯ ಅರ್ಹತಾ ಪರೀಕ್ಷೆ ನಡೆಯಲಿದೆ. ಉತ್ತರ ಕರ್ನಾಟಕದಿಂದ ಹೆಚ್ಚು ಅಭ್ಯರ್ಥಿಗಳು ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪ್ರತಿ ಅಭ್ಯರ್ಥಿಯು 1600 ಮೀ ಓಡಿದಲ್ಲಿ ಮಾತ್ರವೇ ಈ ಹುದ್ದೆಗೆ ಅರ್ಹತೆ ಪಡೆಯುವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಸಂದರ್ಭ ಪೊಲೀಸ್ ಕಮಿಷನರ್, ಕ್ರೈಮ್ ಡಿಸಿಪಿ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News