ಗ್ರಾಮೀಣ ಪ್ರದೇಶದಲ್ಲಿ ಸಮಾಜ ಮುಖಿ ಚಿಂತನೆಗಳುಳ್ಳ ಕೆಲಸ ನಿರಂತರವಾಗಿ ನಡೆಯುತ್ತಿರಬೇಕು - ಶಮಿನಾ ಆಳ್ವಾ
ಮುಲ್ಕಿ, ಮಾ.14: ಗ್ರಾಮೀಣ ಪ್ರದೆೀಶದಲ್ಲಿ ಸಮಾಜ ಮುಖಿ ಚಿಂತನೆಗಳುಳ್ಳಕೆಲಸ ನಿರಂತರವಾಗಿ ನಡೆಯುತ್ತಿರಬೇಕು ಎಂದು ಮುಲ್ಕಿ ವಿಜಯಾ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆ ಶಮಿನಾ ಆಳ್ವಾ ಹೇಳಿದರು.
ಅವರು ಕೆ.ಎಸ್.ರಾವ್.ನಗರದ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಸಂಯೋಜನೆಯಲ್ಲಿ ವಿವಿಧ ಸಮಗ ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಭಾನುವಾರ ನಡೆದ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿಯ ಸ್ವಾಮೀ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ ಅಧ್ಯಕ್ಷತೆವಹಿಸಿ
ದ್ದರು. ಕೆ.ಎಸ್.ರಾವ್.ನಗರದ ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ರಾಘವ ಸುವರ್ಣ, ಮುಲ್ಕಿ ಪ್ರೆಸ್ ಕ್ಲಬ್‌ನ ಅಧ್ಯಕ್ಷ ನರೇಂದ್ರ ಕೆರೆಕಾಡು,ಸೀತಾರಾಮ ಶೆಟ್ಟಿ ಎಳತ್ತೂರು, ಜಯಕುಮಾರ್ ಕುಬೆವೂರು ಮುಲ್ಕಿ ಯುವವಾಹಿನಿಯ ಉಪಾಧ್ಯಕ್ಷ ಚೇತನ್‌ಕುಮಾರ್, ಶಿಬಿರದ ವೈದ್ಯರಾದ ಡಾ. ಅನಿಲ್, ಡಾ. ಉಮೇಶ್, ಮತ್ತಿತರರುಉಪಸ್ಥಿತರಿದ್ದರು.