×
Ad

ಸ್ತ್ರೀ, ಪುರುಷರಿಬ್ಬರಿಗೂ ಸಮಾನ ಸ್ವಾತಂತ್ರ್ಯ, ಸ್ಥಾನ-ಮಾನ, ಅವಕಾಶ ಅಧಿಕಾರ ಇದೆ - ಡಾ. ಸಾಯಿಗೀತಾ

Update: 2016-03-14 17:02 IST

 ಕಿನ್ನಿಗೋಳಿ, ಮಾ.14: ಮಹಿಳೆ ಸಮಾಜದಲ್ಲಿ ಆರ್ಥಿಕವಾಗಿ ಶೈಕಣಿಕವಾಗಿ ಮುಂದುವರಿದ್ದಿದ್ದಾಳೆ ಇಂದು ಸ್ತ್ರೀ ಪುರುಷರಿಬ್ಬರಿಗೂ ಸಮಾನ ಸ್ವಾತಂತ್ರ್ಯ, ಸ್ಥಾನ-ಮಾನ, ಅವಕಾಶ ಅಧಿಕಾರ ಇದೆ ಅದನ್ನು ಸದುಪಯೋಗ ಪಡೆಯಬೇಕು ಎಂದು ಕೆ. ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನ ಉಪನ್ಯಾಸಕಿ ಡಾ. ಸಾಯಿಗೀತಾ ಹೇಳಿದರು.  ತೋಕೂರು - ಕಂಬಳಬೆಟ್ಟು ಶ್ರೀ ದೇವಿ ಮಹಿಳಾ ಮಂಡಲದ ವಠಾರದಲ್ಲಿ ಶ್ರೀದೇವಿ ಮಹಿಳಾ ಮಂಡಲ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಲಯನ್ಸ್ ಕ್ಲಬ್ ಮುಲ್ಕಿ ಮತ್ತು ಕಿನ್ನಿಗೋಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪೊಂಜೊಂವುಲೆನ ತುಡರ ಪರ್ಬ ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆಯ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.  

ಈ ಸಂಧರ್ಭದಲ್ಲಿ ಫವರ್ ಲಿಫ್ಟರ್ ಅಕ್ಷತಾ ಪೂಜಾರಿ ಬೋಳ ಅವರನ್ನು ಸಮ್ಮಾನಿಸಿಗೌರವಿಸಲಾಯಿತು. 60 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಉದ್ಯಮಿ ಸಂದೇಶ್ ಕುಮಾರ್ ಶೆಟ್ಟಿ ಅದ್ಯಕ್ಷತೆ ವಹಿಸಿದ್ದರು. ತುಳು ಸಾಹಿತ್ಯ ಅಕಾಡೆಮಿಯ ರೂಪಕಲಾ ಆಳ್ವ , ಮುಲ್ಕಿ ಲಯನ್ಸ್ ನ ದೇವಪ್ರಸಾದ್ ಆಳ್ವ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅದ್ಯಕ್ಷ ಸುಧಾಕರ ಶೆಟ್ಟಿ , ಪಡುಪಣಂಬೂರು ಗ್ರಾ. ಪಂ. ಅದ್ಯಕ್ಷ ಮೋಹನ್‌ದಾಸ್, ಫಿಲೋಮಿನಾ ತಾವ್ರೋ, ಮಹಿಳಾ ಮಂಡಲದ ಅಧ್ಯಕ್ಷೆ ವಿಲಾಸಿನಿ ಮೆಂಡನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News