×
Ad

ಮುಲ್ಕಿ : ನ್ಯೂ ಸ್ಟಾರ್ ಯೂತ್ ಕ್ಲಬ್ ನ 20 ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಕ್ರಿಕೆಟ್ ಪಂದ್ಯಾಕೂಟದ ಸಮಾರೋಪ ಸಮಾರಂಭ

Update: 2016-03-14 17:07 IST

ಮುಲ್ಕಿ, ಮಾ. 14: ಸಂಘ ಸಂಸ್ಥೆಗಳು ಸಮಾಜದ ಬಡ, ನಿರ್ಗತಿಕರು ಸೇರಿದಂತೆ ಪ್ರತಿಭಾನ್ವಿತ ಪ್ರತಿಭೆಗಳನ್ನು ಗುರುತಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಅಂಗರಗುಡ್ಡೆಯ ನ್ಯೂ ಸ್ಟಾರ್ ಯೂತ್ ಕ್ಲಬ್ ಎಂದು ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ದೆಪ್ಪಣಿ ಗುತ್ತು ಕಿಶೋರ್ ಶೆಟ್ಟಿ ಹೇಳಿದರು.

ಅವರು ಅಂಗರಗುಡ್ಡೆಯ ನ್ಯೂ ಸ್ಟಾರ್ ಯೂತ್ ಕ್ಲಬ್ ನ 20 ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಕ್ರಿಕೆಟ್ ಪಂದ್ಯಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಿತಿನ್ ಮುಲ್ಕಿ, ವಿಲ್ಸನ್ ಫೆರ್ನಾಂಡಿಸ್, ಸಾದಿಕ್ ಗುತ್ತಕಾಡು, ಕುಮಾರಿ ಅಶ್ವಿನಿ, ಅಕ್ಸಾನ, ಮಾಸ್ಟರ್ ಆಸಿಮ್, ಹುಸೈನ್ ಅಂಗಾರಗುಡ್ಡೆ, ಆನಂದ್ ಶೆಟ್ಟಿಗಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಅತಿಕಾತಿಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಜೀವನ್ ಶೆಟ್ಟಿ, ಕಿನ್ನಿಗೋಳಿ ರೋಟರಿ ಕ್ಲಬ್ ನ ಮಾಜೀ ಅಧ್ಯಕ್ಷ ಜೊಸ್ಸಿ ಪಿಂಟೋ, ಅಂಗರ ಗುಡ್ಡೆ ಬದ್ರಿಯಾ ಜುಮಾ ಮಸೀದಿಯ ಕಾರ್ಯದರ್ಶಿ ಕೆ.ಎ. ಆಸೀಫ್, ಶ್ರೀ ರಾಮ ಬಜನಾ ಮಂದಿರದ ಅಧ್ಯಕ್ಷ ಸತೀಶ್ ಪೂಜಾರಿ, ಎಸ್.ಡಿ.ಪಿ.ಐ ಮುಲ್ಕಿ ನಗರ ಸಮಿತಿ ಸಂಚಾಲಕ ಶರೀಫ್ ಕೊಲ್ನಾಡು, ಬದ್ರಿಯಾ ಜುಮಾ ಮಸೀದಿಯ ಮಾಜೀ ಅಧ್ಯಕ್ಷ ರಿಯಾರ್ ಅಪ್ಸರಾ, ಉಪಾಧ್ಯಕ್ಷ ಮಯ್ಯದ್ದಿ ಪುನರೂರು ಮೊದಲಾದವರು ಉಪಸ್ಥಿತರಿದ್ದರು.

ಪಂದ್ಯಾಕೂಟದಲ್ಲಿ ಸಿಟಿ ಫ್ರೆಂಡ್ಸ್ ಕೊಲ್ನಾಡು ಮೊದಲ ಬಹುಮಾನ ಪಡೆದರೆ, ನವಭಾರತ್ ಕೆ.ಎಸ್.ರಾವ್ ನಗರ ದ್ವಿತೀಯ ಸ್ಥಾನ ಪಡೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News