ಕಿನ್ನಿಗೋಳಿ: ಚಿನ್ನದ ಖರೀದಿಯ ಮೇಲಿನ ತೆರಿಗೆಯನ್ನು ಖಂಡಿಸಿ ಸಭೆ
Update: 2016-03-14 17:09 IST
ಕಿನ್ನಿಗೋಳಿ, ಮಾ. 14: ಚಿನ್ನದ ಖರೀದಿಯ ಮೇಲಿನ ತೆರಿಗೆಯನ್ನು ಖಂಡಿಸಿ ಹಳೆಯಂಗಡಿ, ಕಿನ್ನಿಗೋಳಿ, ಮುಲ್ಕಿ ಸ್ವರ್ಣೋದ್ಯಮ ಹಿತರಕ್ಷಣಾ ಸಮಿತಿ ವತಿಯಿಂದ ಕಿನ್ನಿಗೋಳಿಯ ವಿಶ್ವಕರ್ಮ ಸಭಾನದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದು ಮುಂದಿನ ಮಂಗಳವಾರ ಕಿನ್ನಿಗೋಳಿಯಿಂದ ಹಳೆಯಂಗಡಿ ಮೂಖಾಂತರ ಮುಲ್ಕಿ ಕಾರ್ನಾಡ್ ವರೆಗೆ ಬೈಕ್ ಜಾಥ ನಡೆಸಿ ನಂತರ ಕಾರ್ನಾಡ್ ನಿಂದ ಮುಲ್ಕಿ ತಹಶಿಲ್ದಾರ್ ಕಚೇರಿಗೆ ಕಾಲ್ನಡಿಗೆ ಮೂಲಕ ಸಾಗಿ ತಶೀಲ್ದಾರಿಗೆ ಮನವಿ ಸಲ್ಲಿಸುವುದೆಂದು ತೀರ್ಮಾನಿಸಲಾಯಿತು. ಈ ಸಂದರ್ಭ ಮುಲ್ಕಿ ವಲಯದ ಸ್ವರ್ಣೋದ್ಯಮ ಹಿತರಕ್ಷಣಾ ಸಮಿತಿಯ ಜಗದೀಶ್ ಪಡುಪಣಂಬೂರು, ಕಿನ್ನಿಗೋಳಿ ವಲಯದ ಉದಯ ಕುಮಾರ್, ಹಳೆಯಂಗಡಿಯ ಕರುಣಾಕರ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.