ಕುಂತೂರು: ದ.ಕ.ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ

Update: 2016-03-14 11:44 GMT

ಕಡಬ, ನಾ.14. ಕುಂತೂರು ಗ್ರಾಮದ ಕುಂತೂರು-ಪದವು ನೆಹರು ಯುವಕ ಮಂಡಲದ ಆಶ್ರಯದಲ್ಲಿ ದ.ಕ.ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟವು ಪದವು ನೆಹರು ಯುವಕ ಮಂಡಲದ ಕ್ರೀಡಾಂಗಣದಲ್ಲಿ ನಡೆಯಿತು.
 ಪುತ್ತೂರು ಶಾಸಕಿ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾದ ಶಕುಂತಳಾ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಪದವು ನೆಹರು ಯುವಕ ಮಂಡಲದ ಅಧ್ಯಕ್ಷ ಶಾಜಿ ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು. ಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಿ.ಯಂ.ತೋಮಸ್, ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ ಗೌಡ, ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಘಟದ ಉಪಾಧ್ಯಕ್ಷ ರೋಯ್ ಅಬ್ರಹಾಂ, ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಬೇಬಿ ಸಿ.ಪಾಟಾಳಿ, ಸದಸ್ಯ ಬಾಬು ಗೌಡ ಕೆ.ಎಸ್., ಅಬಕಾರಿ ಇಲಾಖೆಯ ಅಬ್ರಹಾಂ ಪಿ.ಸಿ., ಆರ್.ಎ.ಎಫ್. ಮೋಹಿನಿ ಎಂ.ಮಣಿಕ್ಕಳ, ಪದವು ನೆಹರು ಯುವಕ ಮಂಡಲದ ಅಧ್ಯಕ್ಷ ಅಜಿತ್ ಕುಮಾರ್, ಕಾರ್ಯದರ್ಶಿ ರಾಜು ಪಿ.ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಸಕಿ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ, ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ ಗೌಡ ಹಾಗೂ ಆರ್.ಎ.ಎಫ್ ಮೋಹಿನಿ ಎಂ.ಮಣಿಕ್ಕಳ ಇವರನ್ನು ಸನ್ಮಾನಿಸಲಾಯಿತು. ಗುರುಕಿರಣ್ ಕುಮಾರ್ ಸ್ವಾಗತಿಸಿದರು. ಪದವು ನೆಹರು ಯುವಕ ಮಂಡಲದ ಗೌರವ ಸಲಹೆಗಾರರಾದ ಚಂದ್ರಶೇಖರ ಕೆ.ಕೆದ್ದೊಟ್ಟೆ ಕಾರ್ಯಕ್ರಮ ನಿರೂಪಿಸಿದರು.


ಸಮರೋಪ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಮಾವೇಲಿ ಬ್ರದರ್ಸ್‌ ಪದವು ಪ್ರಥಮ, ಜೆ.ಆರ್.ಫ್ರೆಂಡ್ಸ್ ಪದವು ದ್ವಿತೀಯ, ನೆಹರು ಯುವಕ ಮಂಡಲಿ ಪದವು ತೃತೀಯ ಹಾಗೂ ಮಾವೇಲಿ ಬ್ರದರ್ಸ್‌ ಬಿ., ತಂಡ ಚತುರ್ಥ ಬಹುಮಾನ ಪಡೆದುಕೊಂಡಿತು. ಸುರೇಶ್ ಕುಂಡಡ್ಕ, ಹೆಡ್‌ಕಾನ್ಸ್‌ಟೇಬಲರ್ ಸ್ಕರಿಯ ಎಂ.ಎ., ಕುಂತೂರು ಪದವು ಸಂತ ಜಾರ್ಜ್ ಪ್ರೌಢಶಾಲೆಯ ಸಂಚಾಲಕ ರಾಜು ಕೆ.ಎಸ್., ಕುಂತೂರು ಪದವು ಪಶು ಆಸ್ಪತ್ರೆಯ ಹಿರಿಯ ಪಶುವೈದ್ಯ ಪರೀಕ್ಷಕ ಅಶೋಕ್ ಕುಮಾರ್, ಇಡಾಳ ಸಂಗಮ ಯುವಕ ಮಂಡಲದ ಅಧ್ಯಕ್ಷ ರವಿ ಕೆ. ಕೆದ್ದೊಟೆ, ಪೆರಾಬೆ ಗ್ರಾ.ಪಂ.ಸದಸ್ಯ ಭುವನೇಶ್ವರ ಬಹುಮಾನ ವಿತರಿಸಿದರು. ಪದವು ನೆಹರು ಯುವಕ ಮಂಡಲದ ಅಧ್ಯಕ್ಷ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಾಜು ಪಿ.ಜಿ. ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News