ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನಿರಂತರ ಅಧ್ಯಯನ ಅಗತ್ಯ: ಸತೀಶ್ ಭಟ್
ಕಡಬ, ಮಾ.14.ಮುಂದಿನ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಲಿರುವ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗುವಂತೆ ಮುಂದಿನ 2 ತಿಂಗಳುಗಳ ಕಾಲ ನಡೆಯಲಿರುವ" ಬ್ರಿಡ್ಜ್ ಕೋರ್ಸ್"(ಸೇತುಬಂಧ) ಕಾರ್ಯಕ್ರಮವು ಇತ್ತೀಚೆಗೆ ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮಕುಂಜ ಪ.ಪೂ.ಕಾಲೇಜಿನ ಪ್ರಾಂಶುಪಾಲ ಎಂ.ಸತೀಶ್ ಭಟ್‌ರವರು ಮಾತನಾಡಿ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಶ್ರಾಂತಿ ಎಂಬುದು ಇಲ್ಲ. ನಿರಂತರ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕಾಗಿದೆ. ರಜೆ, ವಿಶ್ರಾಂತಿ ಪಡೆದುಕೊಂಡಲ್ಲಿ ಉದ್ದೇಶ ಈಡೇರುವುದಿಲ್ಲ. ನಿರಂತರ ಪರಿಶ್ರಮ ಅಗತ್ಯವಾಗಿದೆ. ಇದರಿಂದ ಮುಂದೆ ಹೆಚ್ಚು ಅವಕಾಶಗಳು ಲಭಿಸಲಿದ್ದು ಸುಖಿ ಜೀವನ ನಡೆಸಬಹುದು. ಮುಂದಿನ ಭವಿಷ್ಯಕ್ಕೆ ಉತ್ತಮ ಬೆಳಕು ನೀಡಬಹುದು ಎಂದರು. ರಾಮಕುಂಜ ಪದವಿ ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕ ಸಂಕೀರ್ತ ಹೆಬ್ಬಾರ್‌ರವರು ಕಾರ್ಯಕ್ರಮ ಉದ್ಘಾಟಿಸಿ ಮಾಹಿತಿ ನೀಡಿದರು. ಉಪನ್ಯಾಸಕರಾದ ಗಣರಾಜ್ ಕುಂಬ್ಳೆ, ಸುಷ್ಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಿಡ್ಜ್ ಕೋರ್ಸ್‌ನ ಸಂಯೋಜಕರೂ ಆದ ಉಪನ್ಯಾಸಕ ಶ್ಯಾಂ ಪ್ರಸಾದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಅಶ್ವಿತಾ ರೈ ವಂದಿಸಿದರು. ರಾಮಕುಂಜ ಪ.ಪೂ. ಹಾಗೂ ಪುತ್ತೂರು ವಿವೇಕಾನಂದ ಕಾಲೇಜಿನ ಒಟ್ಟು ಸುಮಾರು 90 ವಿದ್ಯಾರ್ಥಿಗಳು’ಬ್ರಿಡ್ಜ್ ಕೋರ್ಸ್’ಗೆ ಸೇರ್ಪಡೆಗೊಂಡಿದ್ದಾರೆ.