×
Ad

ಸುಳ್ಯ: ಸುಧಾರಣೆ ಕಾಣದ ವಿದ್ಯುತ್ ಸಮಸ್ಯೆ-ಪ್ರತಿಭಟನೆ, ಸತ್ಯಾಗ್ರಹ ನಡೆದರೂ ನಡೆಯದ ತಾತ್ಕಾಲಿಕ ವ್ಯವಸ್ಥೆ

Update: 2016-03-14 17:19 IST

      ಸುಳ್ಯ ತಾಲೂಕಿನ ವಿದ್ಯುತ್ ಸಮಸ್ಯೆ ತಾತ್ಕಾಲಿಕವಾಗಿಯೂ ಸುಧಾರಣೆ ಕಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ. ವಿದ್ಯುತ್ ಸಮಸ್ಯೆಯ ಕುರಿತು ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆದು ಮೆಸ್ಕಾಂ ಹಾಗೂ ಕೆ.ಪಿ.ಟಿ. ಸಿ.ಎಲ್. ಅಧಿಕಾರಿಗಳು ಸ್ಥಳಕ್ಕೆ ಬಂದು ತಾತ್ಕಾಲಿಕ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗಳು, ತರಗತಿ ಪರೀಕ್ಷೆಗಳು ನಡೆಯುತ್ತಿದೆ. ಆದರೆ ವಿದ್ಯುತ್ ಆಗಾಗ ಕೈ ಕೊಡುತ್ತಿರುವುದರಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತೊಂದರೆಯಾಗುತ್ತಿದೆ. ಕೃಷಿಕರಂತೂ ಇನ್ನಿಲ್ಲದ ಸಮಸ್ಯೆಗೆ ತುತ್ತಾಗಿದ್ದಾರೆ. ತಾಲೂಕಿನ ವಿದ್ಯುತ್ ಸಮಸ್ಯೆ ಕುರಿತು ಕಳೆದವಾರ ಬಿಜೆಪಿಯಿಂದ ಉಪವಾಸ ಸತ್ಯಾಗ್ರಹ, ಸವಿತಾ ಸಮಾಜದಿಂದ ಪ್ರತಿಭಟನಾ ಜಾಥ ನಡೆದಿತ್ತು. ಜಿಲ್ಲಾಧಿಕಾರಿಗಳು 110.ಕೆ.ವಿ. ಹಾದು ಹೋಗುವ ಮಾರ್ಗದ ಸರ್ವೆ ನಡೆಸಿ ಆಕ್ಷೇಪ ಸಲ್ಲಿಸಿದವರ ಜೊತೆ ಮಾತುಕತೆ ನಡೆಸಿದ್ದರು. ಪ್ರತಿಭಟನೆ ಸಂದರ್ಭ ಸ್ಥಳಕ್ಕೆ ಬಂದ ಮೆಸ್ಕಾಂ ಹಾಗೂ ಕೆ.ಪಿ.ಟಿ.ಸಿ.ಎಲ್. ಅಧಿಕಾರಿ ಗಳು ತಾತ್ಕಾಲಿಕವಾಗಿ ವಿದ್ಯುತ್ ಸಮಸ್ಯೆ ನಿವಾರಿಸುವ ಭರವಸೆ ನೀಡಿದ್ದರು. ಅನಿಯಮಿತ ಲೋಡ್‌ಶೆಡ್ಡಿಂಗ್ ಸಮಸ್ಯೆಯನ್ನು ಏಳು ದಿನಗಳೊಳಗೆ ಸರಿಪಡಿ ಸುವುದಾಗಿ ಭರವಸೆ ನೀಡಿದ್ದರೂ ಇದು ಈಡೇರಿಲ್ಲ. ಸುಳ್ಯಕ್ಕೆ ಪುತ್ತೂರಿನಿಂದ, ಬೆಳ್ಳಾರೆಗೆ ನೆಟ್ಲಮುಡ್ನೂರಿನಿಂದ ವಿದ್ಯುತ್ ನೀಡುವ ವ್ಯವಸ್ಥೆಯಷ್ಟೆ ನಡೆದಿದೆ. ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆದ ಬಳಿಕ ಎರಡು ದಿನ ವಿದ್ಯುತ್ ಸ್ಪಲ್ಪ ಸರಿಯಾಗಿತ್ತು. ಲೋಡ್‌ಶೆಡ್ಡಿಂಗ್ ಕಡಿಮೆಯಾಗಿತ್ತು. ಪಂಪು ಲೈನ್ ಕೂಡಾ ಹೋದರೆ 5 ನಿಮಿಷದಲ್ಲಿ ಸರಿಯಾಗಿ ಮತ್ತೆ ಬರುತ್ತಿತ್ತು. ಆದರೆ ಈ ಸುಧಾರಣೆ ಕೇವಲ 2 ದಿನಕ್ಕೆ ಮಾತ್ರ ಸೀಮಿತವಾಯಿತು. ಬಳಿಕ ಮತ್ತೆ ಈ ಹಿಂದಿನಂತೆ ಲೋಡ್‌ಶೆಡ್ಡಿಂಗ್, ಪವರ್ ಕಟ್ ಮುಂದುವರೆ ದಿದೆ. ಇಲಾಖೆಗೆ ಬಿಸಿ ಮುಟ್ಟಿಸಿದರೆ ಮಾತ್ರ ವಿದ್ಯುತ್ ಸರಿಯಾಗಿ ಬರುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ. 110 ಕೆ.ವಿ. ವಿದ್ಯುತ್ ಕಾಮಗಾರಿ ಆರಂಭಗೊಳ್ಳಬಹುದೆಂಬ ನಿರೀಕ್ಷೆಯಲ್ಲಿ ಮೆಸ್ಕಾಂ ಈ ಹಿಂದಿನ 11 ಕೆ.ವಿ. ಹಾಗೂ 33 ಕೆ.ವಿ. ಯೋಜನೆಯಲ್ಲಿದ್ದ ಹಳೆಯ ವಿದ್ಯುತ್ ತಂತಿಗ ಳನ್ನು ಬದಲಾಯಿಸಲು ಮುಂದಾಗಿರಲಿಲ್ಲ. 110 ಕೆ.ವಿ. ಯೋಜನೆಗೆ ಆಕ್ಷೇಪ ಹಾಗೂ ಇನ್ನೂ ಪ್ರಾಥಮಿಕ ಹಂತದ ಕೆಲಸ ಕಾರ್ಯಗಳು ಆರಂಭಗೊಳ್ಳುವ ಲಕ್ಷಣಗಳು ಕಾಣದಿರುವು ದರಿಂದ ವಿದ್ಯುತ್ ತಂತಿಯ ಬದಲಾವಣೆಯ ಒತ್ತಡ ಕೇಳಿಬಂದಿದೆ. 110.ಕೆ.ವಿ. ಕಾಮಗಾರಿ ಆಕ್ಷೇಪಣೆಗಳೆಲ್ಲಾ ಪರಿಯಾರಗೊಂಡು ವಿದ್ಯುತ್ ಬಂದರೂ ಕನಿಷ್ಟ 2 ವರ್ಷ ಬೇಕಾಗಬಹುದು. ಅಲ್ಲಿಯ ತನಕ ಸಮಸ್ಯೆ ನಿವಾರಣೆಗೆ ವಿದ್ಯುತ್ ತಂತಿ ಬದಲಾವಣೆಯೇ ಪರಿಯಾರ ಮಾರ್ಗ. ಈಗ ಇರುವ 11.ಕೆ.ವಿ. ಹಾಗೂ 110.ಕೆ.ವಿ ವಿದ್ಯುತ್ ಮಾರ್ಗದಲ್ಲಿ ತಂತಿ ಹಳೆಯದಾ ಗಿದ್ದು ಓವರ್‌ಲೋಡ್ ಆದಾಗ ತಂತಿ ತುಂಡ ರಿಸಿ ಹೋಗುತ್ತಿಲ್ಲ. ಆಗಾಗ ಟ್ರಿಪ್ ಕೂಡಾ ಅಗುತ್ತಿದೆ. ಆದ್ದರಿಂದ ತಂತಿ ಹೊಸದಾಗಿ ಅಳವಡಿಸಿದರೆ ಅರ್ಧ ಸಮಸ್ಯೆ ಮುಗಿಯಲು ಸಾಧ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News