ಸೇವಾ ಕಾರ್ಯಕ್ರಮಗಳ ಮೂಲಕ ಸಾರ್ಥಕ ಆಚರಣೆಗೆ ನಿರ್ಧಾರ
ಸುಳ್ಯ: 1917ರಲ್ಲಿ ಆರಂಭಗೊಂಡ ಅಂತರ್‌ರಾಷ್ಟ್ರೀಯ ಲಯನ್ಸ್ ಸಂಸ್ಥೆ ಶತಮಾನೊತ್ಸವ ಸಂಭ್ರಮದಲ್ಲಿದ್ದು, ಹಲವಾರು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಕವಿತಾಶಾಸ್ತ್ರಿ ಹೇಳಿದ್ದಾರೆ.
ಸುಳ್ಯ ಲಯನ್ಸ್ ಕ್ಲಬ್‌ಗೆ ಅಧಿಕೃತ ಭೇಟಿ ನಿಡಿದ ಸಂದರ್ಭ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪರಿಸರ ಸಂರಕ್ಷಣೆ, ಅಂಧತ್ವ ನಿವಾರಣೆ ಹಸಿದವರಿಗೆ ಅನ್ನ ನೀಡುವ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಈ ವರ್ಷ ಲಯನ್ಸ್ ಸಂಸ್ಥೆ ಹಮ್ಮಿಕೊಂಡಿದೆ ಎಂದವರು ಹೇಳಿದರು.
ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ ದೇರಪ್ಪಜ್ಜನಮನೆ, ಕಾರ್ಯದರ್ಶಿ ಎಂ.ಎಸ್.ಪ್ರಸಾದ್, ಖಜಾಂಜಿ ಡಿ.ಟಿ.ದಯಾನಂದ, ಲಯನ್ಸ್ ಕ್ಯಾಬಿನೆಟ್ ಕಾರ್ಯದರ್ಶಿ ವಾಣಿ ಆಳ್ವ, ಲಯನ್ಸ್ ವಲಯಾಧ್ಯಕ್ಷ ಜಾಕೆ ಮಾಧವ ಗೌಡ, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ.ಸದಾಶಿವ, ಲಯನೆಸ್ ಅಧ್ಯಕ್ಷೆ ಪುಷ್ಪಾ ವಿಶ್ವನಾಥ್, ಕಾರ್ಯದರ್ಶಿ ರಾಧಾಮಣಿ, ಖಜಾಂಜಿ ರಮಿತಾ ಜಯರಾಮ, ಲಯನ್ಸ್ ಮತ್ತು ಲಯನೆಸ್ ಸದಸ್ಯರು ಉಪಸ್ಥಿತರಿದ್ದರು.