ಪಂಡಿತರು ಮಾತ್ರವಲ್ಲ, ಮುಸ್ಲಿಮರೂ ಕಾಶ್ಮೀರ ಬಿಟ್ಟು ಬಂದಿದ್ದಾರೆ !
ಜಮ್ಮು,ಮಾ.4: 1990ರ ದಶಕದಲ್ಲಿ ಮೆಶೀನು ಗನ್ನುಗಳನ್ನು ಹಿಡಿದ ಬಂಡುಕೋರರು ಕಾಶ್ಮೀರದ ಅಲ್ಪಸಂಖ್ಯಾತಪಂಡಿತರನ್ನು ಹೊರ ಹಾಕಿದಾಗ ಕಾಶ್ಮೀರಿ ಪಂಡಿತರೊಂದಿಗೆ ಕೆಲವು ಕಾಶ್ಮೀರಿ ಮುಸ್ಲಿಂ ಕುಟುಂಬಗಳೂ, ಯುವಕರೂ ಕಣಿವೆಯನ್ನು ಬಿಟ್ಟು ಹೊರನಡೆದಿದ್ದು, 26 ವರ್ಷಗಳ ನಂತರಈ ಕುಟುಂಬಗಳು ದೇಶದಾದ್ಯಂತ ಪಸರಿಸಿದ್ದು ಅಲ್ಲಿ ತಮ್ಮ ಹೊಸ ಬಾಳುವೆಯನ್ನು ಆರಂಭಿಸಿವೆ. ಗೋವಾ ರಾಜ್ಯವೊಂದರಲ್ಲೇ ಸುಮಾರು 10,000ಕ್ಕೂ ಅಧಿಕ ಕಾಶ್ಮೀರಿ ಮುಸ್ಲಿಮರಿದ್ದಾರೆಂದು ಟೈಮ್ಸ್ ನ್ಯೂಸ್ ನೆಟ್‌ವರ್ಕ್ ವರದಿಯೊಂದು ಹೇಳಿದೆ.
ಹೀಗೆ ಕಾಶ್ಮೀರವನ್ನು 2000ರಲ್ಲಿ ತ್ಯಜಿಸಿ ಬಂದಿದ್ದ ಸಯೀದ್ ಎಂಬ ಯುವಕ ಗೋವಾದಲ್ಲಿ ಕಾಶ್ಮೀರಿ ಶಾಲ್ ಹಾಗೂರತ್ನಗಳ ವ್ಯಾಪಾರ ಮಾಡಲಾರಂಭಿಸಿದ್ದರೆ. ಅಂತೆಯೇ ತನ್ನ ಹೆಸರು ಹೇಳಲಿಚ್ಛಿಸದ ಇನ್ನೊಬ್ಬ ಯುವಕ ಹೀಗೆಂದು ಹೇಳುತ್ತಾನೆ ‘‘ರಾಜಕೀಯದಲ್ಲಿ ಆಸಕ್ತಿಯಿರುವ ನನ್ನಂಥವರಿಗೆಕಾಶ್ಮೀರದಲ್ಲಿ ಸ್ವತಂತ್ರವಾಗಿ ಜೀವಿಸಲು ಸಾಧ್ಯವಿಲ್ಲ.’’ ಆದರೆ ಈ 24 ವರ್ಷದ ಯುವಕಗೋವಾದ ಬಾರ್ ಮತ್ತು ರೆಸ್ಟೊರೆಂಟುಗಳಲ್ಲಿ ದುಡಿಯುತ್ತಿದ್ದು ಇಲ್ಲಿನ ಜನರೊಂದಿಗೆ ಸಹಬಾಳ್ವೆ ನಡೆಸುವುದು ಸುಲಭವೆಂದು ಹೇಳುತ್ತಾರೆ.
ಕೊಚ್ಚಿಯಲ್ಲಿ ಕೂಡ ಸುಮಾರು 40 ಕಾಶ್ಮೀರಿ ಕುಟುಂಬಗಳುಕರಕುಶಲ ವಸ್ತುಗಳ ಮಾರಾಟ ನಡೆಸುತ್ತಿವೆ. ಇಲ್ಲಿ ನಮಗೆ ನಮ್ಮದೇ ಆದ ಮನೆಯಿದೆ ಹಾಗೂ ಎಲ್ಲದಕ್ಕಿಂತ ಹೆಚ್ಚಾಗಿ ಶಾಂತಿಯಿದೆ, ಎಂದು ಕೊಚ್ಚಿಯಲ್ಲಿ ಕರಕುಶಲ ವಸ್ತುಗಳ ಶೋರೂಂ ನಡೆಸುವ ಗುಲ್ಶನ್ ಖಟಾಯ್ ಹೇಳುತ್ತಾರೆ. ತಮ್ಮ ತವರು ರಾಜ್ಯದ ಮೇಲೆ ಈ ಕಾಶ್ಮೀರಿಗಳಿಗೆ ಅಪಾರ ಪ್ರೀತಿಯಿದ್ದರೂ ಅವರು ಯಾರು ಮತ್ತೆ ಅಲ್ಲಿಗೆ ಹೋಗ ಬಯಸುವುದಿಲ್ಲ.
ಕಳೆದ ಎರಡು ದಶಕಗಳಿಂದೀಚೆ ಎಷ್ಟು ಕಾಶ್ಮೀರಿ ಮುಸ್ಲಿಮರು ಕಣಿವೆಯನ್ನು ಬಿಟ್ಟು ತೆರಳಿದ್ದಾರೆಂಬುದಕ್ಕೆ ಅಧಿಕೃತ ದಾಖಲೆಗಳಿಲ್ಲದಿದ್ದರೂ ಅವರಲ್ಲಿ ಹಲವರು ಹತ್ತಿರದ ದಿಲ್ಲಿಯನ್ನು ತಮ್ಮ ಮನೆಯಾಗಿಸಿದ್ದಾರೆ.
ಐಟಿ ಕ್ಷೇತ್ರದಲ್ಲಿ ಬೆಂಗಳೂರು ಹಾಗೂ ಪುಣೆ ಸಾಧಿಸಿದ ಅಭಿವೃದ್ಧಿ ಹಲವು ಕಾಶ್ಮೀರಿಗಳನ್ನು ಅತ್ತ ಸೆಳೆದಿದ್ದು ಬೆಂಗಳೂರಿನಲ್ಲಿ ಸುಮಾರು 500 ಕಾಶ್ಮೀರಿ ಕುಟುಂಬಗಳು ನೆಲೆಸಿವೆಯೆಂದು ಅಲ್ಲಿನ ಕಾಶ್ಮೀರ ಎಸೋಸಿಯೇಶನ್ ಮಾಹಿತಿ ನೀಡುತ್ತದೆ. ಬೆಂಗಳೂರಿನಲ್ಲಿ ಕಾಶ್ಮೀರಿ ಹಿಂದು ಕಲ್ಚರ್ ವೆಲ್ಫೇರ್ ಟ್ರಸ್ಟ್ ಇದ್ದು ಹೆಚ್ಚಿನ ಎಲ್ಲಾ ಕಾಶ್ಮೀರಿ ಕುಟುಂಬಗಳು ಇದರ ಸದಸ್ಯರಾಗಿವೆ.
ಕೃಪೆ: Times of India