×
Ad

ಬೆಳ್ತಂಗಡಿ: ಎಸ್.ಐ.ವಿರುದ್ದ ಕ್ರಮಕೈಗೋಳ್ಳುವಂತೆ ಒತ್ತಾಯಿಸಿ ಗೃಹಸಚಿವರಿಗೆ ಮನವಿ

Update: 2016-03-14 19:03 IST

ಬೆಳ್ತಂಗಡಿ: ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿ ಸುಂದರ ಮಲಕುಡಿಯ ಅವರ ಕೈ ಕಡಿದ ಪ್ರಕರಣದಲ್ಲಿ ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ಇನ್ನೂ ನ್ಯಾಯಸಿಕ್ಕಿಲ್ಲ. ಪೋಲಿಸ್ ವ್ಯವಸ್ಥೆಯ ದೌರ್ಜನ್ಯದಿಂದ ಆರೋಪಿಗಳು ಜಾಮೀನು ಪಡೆದು ಹೊರಬರುವಂತಾಗಿದೆ. ಈ ಪ್ರಕರಣದಲ್ಲಿ ಸಮರ್ಪಕ ತನಿಖೆ ಹಾಗೂ ಕ್ರಮ ಜರುಗಿಸುವಂತೆ ಹಾಗೂ ದಲಿತ ಬಾಲಿಕಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಿದ ಉಪ್ಪಿನಂಗಡಿ ಪೋಲಿಸ್ ಠಾಣೆಯ ಎಸ್.ಐ.ವಿರುದ್ದ ಕ್ರಮಕೈಗೋಳ್ಳುವಂತೆ ಒತ್ತಾಯಿಸಿ ದಲಿತ ಹಕ್ಕುಗಳ ಹೋರಾಟ ಸಮಿತಿ ಮುಖಂಡ ಶೇಖರ ಲಾಯಿಲ ಅವರ ನೇತೃತ್ವದಲ್ಲಿ ಸುಂದರ ಮಲೆಕುಡಿಯ ಮತ್ತು ಇತರರು ಗೃಹಸಚಿವ ಡಾ ಜಿ. ಪರಮೇಶ್ವರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
    ಮನವಿ ಸಲ್ಲಿಸಿದ ಸ್ವೀಕರಿಸಿದ ಸಚಿವರು ಈ ಬಗ್ಗೆ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News