ಮೂಡುಬಿದಿರೆ: ಆಟೋ ಚಾಲಕ-ಮಾಲಕ ಸಂಘದಿಂದ ಸಹಾಯಧನ
Update: 2016-03-14 20:24 IST
ಮೂಡುಬಿದಿರೆ: ಅಪಘಾತದಿಂದ ಮೃತಪಟ್ಟ ಪುತ್ತಿಗೆ ಪದವು ಆಟೋ ಚಾಲಕ ನಾರಾಯಣ ಕುಲಾಲ್ ಅವರ ಕುಟುಂಬಕ್ಕೆ ಆಟೋ ಚಾಲಕ-ಮಾಲಕ ಸಂಘದಿಂದ ಸಹಾಯಧನ ಸೋಮವಾರ ಹಸ್ತಾಂತರಿಸಲಾಯಿತು. ಮೂಡುಬಿದಿರೆ ಆಟೋ ಮಾಲಕ-ಚಾಲಕ ಸಂಘದ ಸಮಾಜಮಂದಿರ ಆಟೋಪಾರ್ಕ್ ಕ್ಷೇಮಾ ನಿಧಿಯೋಜನೆಯಿಂದ ನಾರಾಯಣ ಕುಲಾಲ್ ಅವರ ಪತ್ನಿಗೆ 50 ಸಾವಿರ ರೂ.ಗಳ ಬಾಂಡ್ ಹಾಗೂ ಮೂರು ಸಾವಿರ ನಗದನ್ನು ಸಂಘದ ಅಧ್ಯಕ್ಷ ಭಾಸ್ಕರ ಆಚಾರ್ಯ ಹಸ್ತಾಂತರಿಸಿ, ಕ್ಷೇಮ ನೀಧಿಯ ಯೋಜನೆಯ 1 ಲಕ್ಷ ರೂ. ಇನ್ಸುರೆನ್ಸ್ ಅನ್ನು ದಿ.ನಾರಾಯಣ ಅವರ ಕುಟುಂಬಕ್ಕೆ ಸಿಗಲಿದೆ ಎಂದರು. ಸಂಘದ ಪದಾಧಿಕಾರಗಳಾದ ರಾಮಚಂದ್ರ ಭಟ್, ಪ್ರದೀಪ್ ರೈ, ಸುರೇಶ್ ಕೋಟ್ಯಾನ್, ಜಯರಾಮ್ ರಾವ್, ಸಂತೋಷ್ ಬಾಕ್ಯರ್‌ಕೋಡಿ, ರಾಜು ಶೆಟ್ಟಿ, ಸುಕುಮಾರ್, ಸಂತೋಷ್ ಶೆಟ್ಟಿ, ಭಾಸ್ಕರ ಕೋಟೆಬಾಗಿಲು, ಆನಂದ ಪೂಜಾರಿ, ಸುರೇಶ್ ಪೂಜಾರಿ ಉಪಸ್ಥಿತರಿದ್ದರು.