×
Ad

ಪಾಕ್‌ನಲ್ಲಿ ಭಾರೀ ಮಳೆ: 49 ಬಲಿ

Update: 2016-03-14 21:03 IST

ಇಸ್ಲಾಮಾಬಾದ್, ಮಾ. 14: ಪಾಕಿಸ್ತಾನದಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ 49 ಮಂದಿ ಮೃತಪಟ್ಟಿದ್ದಾರೆ ಹಾಗೂ 80 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.

ಕುಂಭದ್ರೋಣ ಮಳೆಯು ಬಲೂಚಿಸ್ತಾನದಲ್ಲಿ ಗುರುವಾರ ಆರಂಭಗೊಂಡಿತು ಹಾಗೂ ಬಳಿಕ ದೇಶದ ಇತರ ಭಾಗಗಳಿಗೆ ಹರಡಿತು. ಪಾಕಿಸ್ತಾನದಲ್ಲಿ ವಾರಾಂತ್ಯದಲ್ಲಿ ಧಾರಾಕಾರ ಮಳೆ ಸುರಿದಿದ್ದು, 49 ಮಂದಿ ಮೃತಪಟ್ಟರು ಎಂದು ಅಧಿಕಾರಿಗಳು ಹೇಳಿದರು.

ಬಲೂಚಿಸ್ತಾನದಲ್ಲಿ 18, ಬುಡಕಟ್ಟು ಪ್ರದೇಶಗಳಲ್ಲಿ 15, ಪಂಜಾಬ್‌ನಲ್ಲಿ 10 ಮತ್ತು ಖೈಬರ್ ಪಖ್ತೂನ್‌ಖ್ವದಲ್ಲಿ ಆರು ಮಂದಿ ಮಳೆ ಸಂಬಂಧಿ ಅವಗಢಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 75 ಮನೆಗಳು ನಾಶವಾಗಿವೆ.

ಸಾವು-ನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ದಕ್ಷಿಣ ಪಂಜಾಬ್‌ನಲ್ಲಿ ಭಾರೀ ಪ್ರಮಾಣದಲಿ ಗೋಧಿ ಬೆಳೆ ನಾಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News