×
Ad

ಬೊಲಿವಿಯ ಮಾರುಕಟ್ಟೆಯಲ್ಲಿ ಸಣ್ಣ ವಿಮಾನ ಪತನ: 4 ಸಾವು

Update: 2016-03-14 21:08 IST

ಲಾ ಪಾಝ್ (ಬೊಲಿವಿಯ), ಮಾ. 14: ಬೊಲಿವಿಯ ದೇಶದ ಉತ್ತರ ಭಾಗದ ಪಟ್ಟಣವೊಂದರ ಮಾರುಕಟ್ಟೆಗೆ ಸಣ್ಣ ವಿಮಾನವೊಂದು ಅಪ್ಪಳಿಸಿದ್ದು, ವಿಮಾನದಲ್ಲಿದ್ದ ಎಲ್ಲ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ನೆಲದಲ್ಲಿದ್ದ ಮೂವರು ವ್ಯಾಪಾರಿಗಳು ಗಾಯಗೊಂಡಿದ್ದಾರೆ.

ಲಾ ಪಾಝ್‌ನಿಂದ ಸುಮಾರು 500 ಕಿ.ಮೀ. ಉತ್ತರಕ್ಕಿರುವ ಪಟ್ಟಣ ಸಂಟಾನ ಡಿ ಯಕುಮದಲ್ಲಿನ ಮಾರುಕಟ್ಟೆಯ ಪ್ರವೇಶ ದ್ವಾರದ ಸಮೀಪ ಸೆಸ್ನಾ 206 ವಿಮಾನ ಅಪ್ಪಳಿಸಿತು.

ವಿಮಾನದಲ್ಲಿದ್ದ ಎಲ್ಲ ನಾಲ್ವರು ಮೃತಪಟ್ಟರು ಹಾಗೂ ಮಾರುಕಟ್ಟೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಮಹಿಳೆಯರು ಗಾಯಗೊಂಡರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ವಿಮಾನವು ಸಂಟಾನ ಡಿ ಯಕುಮದಿಂದ ಟ್ರಿನಿಡಾಡ್‌ಗೆ ಹಾರುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News