ಅಮೆರಿಕದಲ್ಲಿಮುಸ್ಲಿಮ್ ಮಹಿಳಾ ಒಲಿಂಪಿಯನ್‌ಗೆ ಹಿಜಾಬ್ ತೆಗೆ ಎಂದು ಅಪಮಾನ!

Update: 2016-03-15 05:30 GMT

ಟೆಕ್ಸಾಸ್, ಮಾರ್ಚ್.15:ಅಮೆರಿಕಾದ ಮುಸ್ಲಿಮ್ ಮಹಿಳಾ ಒಲಿಂಪಿಯನ್‌ವೊಬ್ಬರು ಭೇದಭಾವಕ್ಕೆ ಗುರಿಯಾಗಿದ್ದಾರೆ. ಟೆಕ್ಸಾಸ್‌ನಲ್ಲಿ ನಡೆದ ಒಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುತು ಪತ್ರ ಕಳುಹಿಸಿಕೊಡಲಿಕ್ಕಾಗಿ ಫೋಟೊ ತೆಗೆಯುವ ಸಮಯ ಹಿಜಾಬನ್ನು ತೆಗೆಯಲು ಹೇಳಿದ್ದಾರೆ. ವಿಷಯ ಭಾರೀ ವಿವಾದಕ್ಕೆ ಕಾರಣವಾದಾಗ ಆಯೋಜಕರು ಕ್ಷಮೆ ಯಾಚಿಸಿದ್ದಾರೆ.

ಒಲಿಂಪಿಯನ್ ಇಬ್ತಿಯಾಜ್ ಮುಹಮ್ಮದ್‌ರ ಜೊತೆ ಟೆಕ್ಸಾಸ್ ಫೆಸ್ಟಿವಲ್‌ನಲ್ಲಿ ಈಘಟನೆ ನಡೆದಿದೆ. ಮೂವತ್ತು ವರ್ಷದ ಆಟಗಾರ್ತಿ ಟ್ವೀಟ್ ಮಾಡಿ ಫೋಟೊ ತೆಗೆಯುವ ನೌಕರ ಅವರನ್ನು ಹಿಜಾಬ್ ತೆಗೆಯುವಂತೆ ಹೇಳಿದ್ದಾನೆ ಎಂದು ತಿಳಿಸಿದ್ದಾರೆ. ಆದರೆ ಇಬ್ತಿಯಾಜ್‌ರು ತನ್ನ ಧಾರ್ಮಿಕ ಕಾರಣಗಳಿಗಾಗಿ ಹಿಜಾಬ್‌ನ್ನು ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆಗ ಫೋಟೊ ತೆಗೆಯುವವ ಹಿಜಾಬ್ ತೆಗೆದ ಮೇಲೆಯೇ ಫೋಟೊ ತೆಗೆಯಲಾಗುತ್ತದೆ ಎಂದು ಹೇಳಿದ್ದಾನೆ. ಆಯೋಜಕರು ಈ ಘಟನೆಗಾಗಿ ಖೇದ ವ್ಯಕ್ತಪಡಿಸಿದ್ದು. ಫೋಟೊ ಇತರ ಪರಿಚಯ ಚೀಟಿಗಳಿಗಾಗಿ ಹಿಜಾಬ್ ತೆಗೆಯಬೇಕಾದ ಆವಶ್ಯಕತೆ ಇಲ್ಲ ಎಂದು ತಿಳಿಸಿದೆ. ಇಬ್ತಿಯಾಜ್ 2016ರಲ್ಲಿ ರಿಯೊ ಡಿ ಜೆನಿಯರೊ ಒಲಿಂಪಿಕ್‌ನಲ್ಲಿ ಹಿಜಾಬ್ ಧರಿಸಿಯೇ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News