ಮಾ.17;ಗಾಂಧಿ ಮೊಮ್ಮಗ ಗೋಪಾಲ ಕೃಷ್ಣ ಗಾಂಧಿ ನಗರಕ್ಕೆ

Update: 2016-03-15 12:10 GMT

 ಮಂಗಳೂರು.ಮಾ,15:ಮಾರ್ಚ್ 17ರಂದು ನಗರದ ರವೀಂದ್ರ ಕಲಾಭವನದಲ್ಲಿ ನಡೆಯಲಿರುವ ‘ಗಾಂಧಿ ಹೆಜ್ಜೆಯ ಜಾಡಿನಲ್ಲಿ ಜತ್ತಪ್ಪ ರೈ ಜೀವನಗಾಥೆ ’ಹಾಗೂ ‘ಗಾಂಧಿ ವಿಚಾರ ಧಾರೆ ಸಾರ್ವಕಾಲಿಕ ರಾಜಕೀಯ ಒಂದು ಪವಿತ್ರ ಸೇವೆ’ಎಂಬ ವಿಚಾರ ಸಂಕಿರಣದ ಉದ್ಘಾಟಕರಾಗಿ ಪಶ್ಚಿಮ ಬಂಗಾಲದ ಮಾಜಿ ರಾಜ್ಯಪಾಲರು,ಮಹಾತ್ಮ ಗಾಂಧಿ ಹಾಗೂ ಚಕ್ರವರ್ತಿ ರಾಜಗೋಪಾಲಾಚಾರಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಭಾಗವಹಿಸಲಿದ್ದಾರೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

                   ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜು,ಗಾಂಧಿ ಸ್ಮಾರಕ ನಿಧಿ ಬೆಂಗಳೂರು,ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಂಶೋಧನಾ ಕೇಂದ್ರ ಉಡುಪಿ,ಪುತ್ತೂರಿನ ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಕಜೆಮಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪ್ರಸಕ್ತ ಕಾಲಘಟ್ಟದಲ್ಲಿ ವಿಶ್ವ ವಿದ್ಯಾನಿಲಯಗಳಲ್ಲಿ ಯುವ ಸಮುದಾಯಕ್ಕೆ ಗಾಂಧಿ ವಿಚಾರಧಾರೆಯ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಈ ವಿಚಾರ ಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿದೆ .ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಪ್ರಥಮ ಬಾರಿಗೆ ಮಂಗಳೂರಿಗೆ ಮಾರ್ಚ್ 17ರಂದು ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಾಧೀಶರಾದ ಸಂತೋಷ್ ಹೆಗ್ಡೆ,ಹಿರಿಯ ಸ್ವಾತಂತ್ರ ಹೋರಾಟ ಗಾರ ಹೆಚ್.ಎಸ್.ದೊರೆಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಕೆ. ಭೈರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.ಸ್ವಾತಂತ್ರ ಹೋರಾಟಗಾರ ಕುಂಬ್ರ ಜತ್ತಪ್ಪ ರೈಗಳ ಪುಸ್ತಕದ ಪ್ರಕಾಶಕರಾದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಹೇರಂಜೆ ಕೃಷ್ಣ ಭಟ್,ಪುಸ್ತಕವನ್ನು ಹೊರತರಲು ಮುಖ್ಯ ಕಾರಣ ಕರ್ತರಾದ ಡಾ.ಏರ್ಯಲಕ್ಷ್ಮೀ ನಾರಾಯಣ ಆಳ್ವ ಸಮಾಂಭದಲ್ಲಿ ಭಾಗವಹಿಸಲಿದ್ದಾರೆ. ವಿಚಾರ ಗೋಷ್ಠಿಯ ಬಳಿಕ ಅಪರಾಹ್ನ 3.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.ಈ ಸಮಾರಂಭದಲ್ಲಿ ನಿಟ್ಟಿ ವಿಶ್ವ ವಿದ್ಯಾ ನಿಲಯದ ಕುಲಪತಿ ಡಾ. ವಿನಯ ಹೆಗ್ಡೆ,ಕೇಂದ್ರ ಕಾನೂನು ಸಚಿವ ಸದಾನಂದ ಗೌಡ,ರಾಜ್ಯದ ಪರಿಸರ,ಜೀವಿಶಾಸ್ತ್ರ ಮತ್ತು ಅರಣ್ಯ ಸಚಿವರು ನಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ,ಕರ್ನಾಟಕದ ಮಾಜಿ ಎಡ್ವಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಡಾ.ಉದಯ ಕುಮಾರ್ ತಿಳಿಸಿದರು.

  ಎಲೆಮರೆಯ ಕಾಯಿಯಂತೆ ಬದುಕಿದ್ದ ಸ್ವಾತಂತ್ರ ಹೋರಾಟಗಾರ:-ಕುಂಬ್ರ ಜತ್ತಪ್ಪ ರೈಗಳು ಎಲೆಮರೆಯ ಕಾಯಿಯಂತೆ ಬದುಕಿದ್ದ ಸ್ವಾತಂತ್ರ ಹೋರಾಟ ಗಾರರಾಗಿದ್ದರು.ಅವರು ಸ್ವಾತಂತ್ರ ಹೋರಾಟಗಾರರಾಗಿ ಸೆರೆಮನೆ ವಾಸ ಅನುಭವಿಸಿದ್ದರೂ ಸ್ವಾತಂತ್ರ ಹೋರಾಟಗಾರರಿಗೆ ಸಿಗುವ ಸರಕಾರದ ಸೌಲಭ್ಯಗಳನ್ನು ಸ್ವೀಕರಿಸದೆ,ಗೌರವ ಧನವನ್ನು ಸ್ವೀಕರಿಸದೆ ಆದರ್ಶವಾದಿಯಾಗಿ ಬದುಕಿದ್ದರು.ಸಾಯುವ ವರೆಗೂ ಕಟ್ಟಾ ಗಾಂಧಿವಾದಿಯಾಗಿದ್ದರು ಇಂತಹ ವ್ಯಕ್ತಿತ್ವ ನಮ್ಮ ಇತಿಹಾಸದ ಪುಟಗಳಿಂದ ಮರೆಯಾಗಬಾರದು ಎಂದು ಅವರ ಜೀವನ ಚರಿತ್ರೆಯನ್ನು ಹೊರತರಬೇಕೆಂದ ಹಂಬಲ ಉಂಟಾಯಿತು.ಈ ಪ್ರಯತ್ನದಲ್ಲಿ ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದೊಂದಿಗೆ ವಿವಿಧ ಸಂಸ್ಥೆಗಳು ಸಹಕಾರ ನೀಡಿವೆ ಎಂದು ಏರ್ಯಲಕ್ಷ್ಮೀ ನಾರಾಯುಣ ಆಳ್ವ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಸಂಚಾಲಕ ಇಳಂತಾಜೆ ಪ್ರಮೋದ್ ಕುಮಾರ್ ರೈ ,ಏರ್ಯಲಕ್ಷ್ಮೀನಾರಾಯಣ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News