ಕಾರ್ಕಳ: ಉಪನ್ಯಾಸ ಕಾರ್ಯಕ್ರಮ
Update: 2016-03-15 17:59 IST
ಕಾರ್ಕಳ: ಸ್ಥಳೀಯ ರೋಟರಿ ಬಾಲಭವನದಲ್ಲಿ ಉಪನ್ಯಾಸ ಕಾರ್ಯಕ್ರಮ ಬುಧವಾರನಡೆಯಿತು. ಉತ್ತಮ ಮಾನವೀಯ ಸಂಬಂಧಗಳ ಅವಶ್ಯಕತೆಗಳ ಬಗ್ಗೆ ಹರಿದಾಸ ಬಿ.ಸಿ.ರಾವ್ ಶಿವಪುರ ಉಪನ್ಯಾಸ ನೀಡಿದರು. ಅನಂತಶಯನದಲ್ಲಿ ರೋಟರಿ ಸಂಸ್ಥೆಗಳ ನೆರವಿನಿಂದ ನಿರ್ಮಿಸಲಾದ ಬಸ್ಸು ತಂಗುದಾಣದ ರಚನೆಗೆ ಧನಸಹಾಯ ನೀಡಿದ ರೋಟರಿ ಹಾಗೂ ರೋಟರ್ಯಾಕ್ಟ್ ಸದಸ್ಯರನ್ನು ಗೌರವಿಸಲಾಯಿತು. ರೋಟರಿ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಪದ್ಮಪ್ರಸಾದ್ ವಂದಿಸಿದರು.