ಕೊಹ್ಲಿಯೊಂದಿಗೆ ಮದುವೆ ಪ್ರಸ್ತಾಪ ಮಾಡಿದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಾರೆ ಭಾರತಕ್ಕೆ
ಹೊಸದಿಲ್ಲಿ, ಮಾರ್ಚ್.15: ಭಾರತ ಕ್ರೆಕೆಟ್‌ತಾರೆ ವಿರಾಟ್ ಕೊಯ್ಲಿಯ ಅಭಿಮಾನಿಯಾಗಿ ಅವರೊಡನೆ ವಿವಾಹ ಪ್ರಸ್ತಾಪ ಮುಂದಿಟ್ಟ ಇಂಗ್ಲಿಷ್ ಮಹಿಳಾ ಕ್ರಿಕೆಟ್ ತಾರೆ ಡಾನಿಟಿ ವೈಟ್ ಭಾರತಕ್ಕೆ ಬಂದಿದ್ದಾರೆ. ಅವರು ಕೊಯ್ಲಿ ಅಭಿಮಾನಿಯಾಗಿ ಎರಡು ವರ್ಷಗಳ ಮುಂಚೆ ವಿವಾಹ ಪ್ರಸ್ತಾಪವನ್ನು ಕೊಯ್ಲಿಗೆ ನೀಡಿದ್ದರು. ಈಗ ಇಂಗ್ಲಿಷ್ ಮಹಿಳಾ ಕ್ರಿಕೆಟ್ ಟ್ವೆಂಟಿ-20 ತಂಡದ ಜೊತೆಗೆ ಭಾರತಕ್ಕೆ ಬಂದಿದ್ದಾರೆ. ಇದರೊಂದಿಗೆ ಡಾನಿಟಿಯ ಹಳೆಯ ಟ್ವಿಟರ್ ಅಭಿಮಾನಿಗಳು ಮರು ಊರ್ಜಿತಗೊಳಿಸಿದ್ದಾರೆ. ಡಾನಿಟಿ ಮತ್ತು ಕೊಹ್ಲಿ ಇಂಗ್ಲೆಂಡ್‌ನಲ್ಲಿ ಒಂದು ಸಂದರ್ಭದಲ್ಲಿ ಭೇಟಿಯಾಗಿದ್ದರು. ಪರಸ್ಪರ ಫೋಟೊ ತೆಗೆಸಿಕೊಂಡಿದ್ದರು. ಈ ಫೋಟೊಗಳು ಕೂಡಾ ಸೋಶಿಯಲ್ ಮೀಡಿಯದಲ್ಲಿ ಈಗ ಚಲಾವಣೆಯಲ್ಲಿವೆ. ಇಪ್ಪತ್ತನಾಲ್ಕುವರ್ಷದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಾರೆ 2014ರಲ್ಲಿ ಕೊಹ್ಲಿಯ ಪ್ರಚಂಡ ಪ್ರದರ್ಶನಕ್ಕೆ ಮಾರು ಹೋಗಿ ತನ್ನನ್ನು ಮದುವೆಯಾಗಿವಿರಾ ಎಂದು ವಿನಂತಿಸಿಕೊಂಡಿದ್ದರು. ಆ ನಂತರ ಕೊಹ್ಲಿಯನ್ನು ಹೊಗಳಿ ಹಲವು ಪೋಸ್ಟ್‌ಗಳನ್ನೂ ಹಾಕಿದ್ದರು. ಮಹಿಳಾ ವಿಶ್ವಕಪ್ ಆಡಲು ಭಾರತಕ್ಕೆ ಬಂದ ಡಾನಿಟಿ ವೈಟ್ ಮತ್ತೊಮ್ಮೆ ವಿರಾಟ್ ಕೊಹ್ಲಿಯನ್ನು ಭೇಟಿಯಾಗುವರೋ ಎಂದು ಈಗ ಅಭಿಮಾನಿಗಳಲ್ಲಿ ಕುತೂಹಲ ಕೆರಳಿದೆ.