ಭಟ್ಕಳ: ಕಯುಡಿ ವಿಭಾಗೀಯ ಕ್ರಿಕೆಟ್; ಅಂಜುಮನ ಮಹಾವಿದ್ಯಾಲದ ಮಡಿಲಿಗೆ
ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇದರ 2ನೇ ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಭಟ್ಕಳ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಂಡ್ ವಾಗಿ ಎರಡನೇ ಬಾರಿ ಗೆದ್ದುಕೊಂಡಿದೆ.
ಭಟ್ಕಳ ಅಂಜುಮನ್ ತಂಡವು ಅಂತಿಮ ಪಂದ್ಯಾಟದಲ್ಲಿ ಧಾರವಾಡದ ಜಿ.ಜೆ ಕಾಲೇಜ್ ಆಫ್ ಕಾಮರ್ಸ್ ಆಫ್ ಡೆಂಟಲ್ ಕಾಲೇಜ್ ತಂಡವನ್ನು 11 ರನ್ ಗಳ ಅಂತರದಿಂದ ಮಣಿಸಿ ಪ್ರಶಸ್ತಿಯ್ನು ತನ್ನ ಮುಡಿಲಿಗೇರಿಸಿಕೊಂಡಿದೆ.
ವಾಖಾಸ್ ಆಹ್ಮದ್ ಟಾಸ್ ಗೆಲುವುದರ ಮೂಲಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಪ್ರದರ್ಶನ ನೀಡಿದರು. ಅಂಜುಮನ್ ತಂಡದ ಬೌಲರ್(39/3) ಇಕ್ರಾಮ್ ಉತ್ತಮವಾಗಿ ಬೌಲ್ ಮಾಡಿದ್ದು ಇವರ ಬೌಲಿಂಗ್ ಶೈಲಿಯ ಮುಂದೆ ಧಾರವಾಡ ತಂಡವು ತತ್ತರಿಸಿತು. ಮಾರ್ ಕಫ್ತಿಗೆ ಪಂದ್ಯ ಪುರುಷೋತ್ತಮ ಹಾಗೂ ಇಹಾಬ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಧಾರವಾಡ 2ನೇ ವಲಯದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟೂ 14 ತಂಡಗಳು ಭಾಗವಹಿಸಿದ್ದವು. ಅಂಜುಮನ್ ತಂಡದ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹೀಮ್ ಜುಕಾಕೋ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅನ್ಸಾರ್ ಕಾಶಿಮಜಿ, ಕಾಲೇಜ್ ಬೋರ್ಡ್ ಕಾರ್ಯದರ್ಶಿ ಅಲ್ತಾಫ್ ಖಮರಿ, ಪ್ರಾಂಶುಪಾಲ ಮುಹಮ್ಮದ್ ಮೊಹಸಿನ್ ಹಾಗೂ ಶಾರಿರಿಕ ಶಿಕ್ಷಣ ತರಬೇತುದಾರ ಮೋಹನ್ ಮೇಸ್ತ ವಿದ್ಯಾರ್ಥಿಗಳುನ್ನು ಅಭಿನಂದಿಸಿದ್ದಾರೆ