×
Ad

ಕುದುರೆಯ ಕಾಲು ಮುರಿದ ಬಿಜೆಪಿ ಶಾಸಕನ ಕೃತ್ಯಕ್ಕೆ ವ್ಯಾಪಕ ಆಕ್ರೋಶ

Update: 2016-03-15 19:00 IST

ಮುಂಬೈ, ಮಾ. 15 : ಡೆಹ್ರಾಡೂನ್ ನಲ್ಲಿ ಬಿಜೆಪಿ ಶಾಸಕ ಗಣೇಶ್ ಜೋಶಿ ಪೊಲೀಸ್ ಕುದುರೆಗೆ  ಎದ್ವಾತದ್ವಾ ದೊಣ್ಣೆಯೊಂದರಲ್ಲಿ ಹೊಡೆದು ಅದರ ಕಾಲು ಮುರಿದು ಹಾಕಿರುವ ಆಘಾತಕಾರಿ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

" ಈ ವ್ಯಕ್ತಿ ಇಡೀ ಸಮಾಜಕ್ಕೆ ಅಪಾಯಕಾರಿ. ಅಮಾಯಕ ಪ್ರಾಣಿಯೊಂದಿಗೆ ಹೀಗೆ ಮಾಡಿದವನು ಮನುಷ್ಯರಿಗೂ ಹೀಗೇ ಮಾಡಬಹುದು.  ಈತನನ್ನು ಪಕ್ಷ ಹಾಗು ಶಾಸನ ಸಭೆಯಿಂದ ಹೊರಗೆ ಹಾಕಬೇಕು" ಎಂದು ಪ್ರಾಣಿ ದಯಾ ಸಂಸ್ಥೆ ' ಪೇಟಾ' ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ವಾ ಜೋಶಿಪುರ ಆಗ್ರಹಿಸಿದ್ದಾರೆ. 

ಪ್ರಧಾನಿ ಮೋದಿ ಅವರು ತಮ್ಮ ಪಕ್ಷದ ಮುಖಂಡನ ಈ ವರ್ತನೆಯನ್ನು ಸಾರ್ವಜನಿಕವಾಗಿ ಖಂಡಿಸಿ ಸೂಕ್ತ ಸಂದೇಶ ರವಾನಿಸಬೇಕು.  ಪಕ್ಷಾಧ್ಯಕ್ಷ ಅಮಿತ್ ಷಾ ಅವರು ಜೋಷಿಯನ್ನು ಪಕ್ಷದಿಂದ ತೆಗೆದು ಹಾಕಬೇಕು ಎಂದು ಪೂರ್ವಾ ಆಗ್ರಹಿಸಿದ್ದಾರೆ. 

ಬಾಲಿವುಡ್ ನಟಿ ಸೋನಂ ಕಪೂರ್ ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. " ಇದು ಅತ್ಯಂತ ಹೇಯ , ಅಮಾನವೀಯ ವರ್ತನೆ , ನೀವು ಈ ವ್ಯಕ್ತಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೀರಿ ಎಂದು ಆಶಿಸುತ್ತೇನೆ " ಎಂದು ಸೋನಂ , ಉತ್ತಾರಾಖಂಡದ  ಮುಖ್ಯಮಂತ್ರಿ ಹರೀಶ್ ರಾವತ್ ಅವರನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News