×
Ad

ಮೂಡುಬಿದಿರೆ : ಬಾಲ್ ಬಾಡ್ಮಿಟನ್ : ಆಳ್ವಾಸ್ ಸತತ 12ನೇ ಬಾರಿ ಪ್ರಶಸ್ತಿ

Update: 2016-03-15 19:47 IST

ಮೂಡುಬಿದಿರೆ : ಆಳ್ವಾಸ್ ಕಾಲೇಜಿನ ಪುರುಷರ ತಂಡ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ ಮುಕ್ತಯಗೊಂಡು ಮಂಗಳೂರು ವಿವಿ ಪುರುಷರ ಬಾಲ್ ಬಾಡ್ಮಟನ್ ಪ್ರಶಸ್ತಿ ಪಡೆಯುದರ ಮೂಲಕ ಸತತ 12 ನೇ ಬಾರಿ ಎಂ.ಕೆ ಅನಂತರರಾಜ್ ಸ್ಮಾರಕ ಪರ್ಯಾಯ ಫಲಕವನ್ನು ತನ್ನಲ್ಲೇ ಉಳಿಸಿಕೊಂಡಿತು.

         ಮಂಗಳೂರು ವಿವಿ ವ್ಯಾಪ್ತಿಯ 14 ತಂಡಗಳಿ ಭಾಗವಹಿಸಿದ್ದು ಈ ಟೂರ್ನಿಯ ಪೈನಲ್‌ನಲ್ಲಿ ಆಳ್ವಾಸ್ ತಂಡ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ತಂಡವನ್ನು 29-6 ಹಾಗೂ 29-4 ನೇರ ಸೆಟ್‌ಗಳಿಂದ ಸೋಲಿಸಿದೆ. ಸೆಮಿಪೈನಲ್‌ನಲ್ಲಿ ಆಳ್ವಾಸ್ ತಂಡ ಭಂಡಕಾರ್ಸ ತಂಡವನ್ನು 29-4 , 29-4 ಅಂಕಗಳಿಂದ ಸೋಲಿಸಿ ಫೈನಲ್‌ಗೆ ತೇರ್ಗಡೆ ಹೊಂದಿತು. ವಾಮದ ಪದವು ತಂಡ ಎಸ್,ಹೆಚ್,ಸಿ ಮಂಡತ್ಯಾರ್ ತಂಡವನ್ನು 29-8, 29-27 ಸೋಲಿಸಿ ಪೈನಲ್ಗೆ ಪ್ರವೇಶಿಸಿತ್ತು.

  ಆಳ್ವಾಸ್ ಕಾಲೇಜು ತಂಡ ಗೋಪಾಲರವರು ಟೊರ್ನಮೆಂಟ್‌ನ ಅತ್ಯುತ್ತಮ ಆಟಗಾರನಾಗಿ ಮೂಡಿಬಂದಿತ್ತು. ಸಮರೋಪ ಸಮಾರಂಭದಲ್ಲಿ ಅಂಡಾರು ಗುಣಪಾಲ ಹೆಗ್ಡೆ ಬಹುಮಾನ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News