ಭಟ್ಕಳ: ಮಾ.17ಕ್ಕೆ ಅಂಜುಮನ್ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯಮಟ್ಟದ ಫೆಸ್ಟ್ ಇನ್ನೋವೇಟಿಯ-16
ಭಟ್ಕಳ: ಅಂಜುಮನ್ ಹಾಮಿಯೆ ಮಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಮ್ಯಾನೇಜ್ಮೆಂಟ್ ಮತ್ತು ಅಪ್ಲಿಕೇಶನ್ ಸಂಸ್ಥೆಯು ವಿದಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರತಿಭೆಗಳನ್ನು ಗುರುತಿಸುವ ಇನ್ನೋವೇಟಿಯ16 ಕಾರ್ಯಕ್ರಮ ಆಯೋಜಿಸಿದ್ದಾಗಿ ಸಂಸ್ಥೆಯ ಪ್ರಾಂಶುಪಾಲ ಮುಹಮ್ಮದ್ ಮೊಹಸಿನ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತರುವಲ್ಲಿ ಇಂತಹ ಫೆಸ್ಟ್ ಗಳು ಸಹಕಾರಿಯಾಗಿದ್ದು ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ವಿವಿಧ ಕ್ಷತ್ರಗಳಲ್ಲಿ ಹೇಗೆ ಪರಿಣಿತಿಯನ್ನು ಸಾಧಿಸಬಹುದಾಗಿದೆ ಎನ್ನುವುದರ ಕುರಿತು ಮಾನಸಿಕವಾಗಿ ಸಿದ್ಧಗೊಳಿಸಲಾಗುವುದು ಎಂದ ಅವರು ಮಾನಸಿಕ ಸಾಮಾರ್ಥ್ಯ, ಲಾಜಿಕಲ್ ಥಿಂಕಿಂಗ್, ಕಾರ್ಪೋರೆಟ್ ವರ್ಲ್ಡ ಕುರಿತಂತೆ ವಿವಿಧ ಸ್ಪರ್ಧೆಗಳು ಇದ್ದು ಒಟ್ಟು 60 ಸಾವಿರಕ್ಕೂ ಹೆಚ್ಚು ಬಹಮಾನಗಳು ಕಾರ್ಯಕ್ರಮದಲ್ಲಿ ನೀಡಲಾಗುವುದು. ರಾಜ್ಯಾದ್ಯಂತ ಸುಮಾರು 30ಕ್ಕೂ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಸ್ಟ್ ಮ್ಯಾನೇಜರ್, ಮಾರ್ಕೇಟಿಂಗ್, ಸಾಮಾನ್ಯ ಜ್ಞಾನ, ಹಣಕಾಸು, ಮುಂತಾದ ವಿಷಯಗಳ ಕುರಿತು ಸ್ಪರ್ಧೆ ನಡೆಯಲಿದೆ.
ಸಮಾರಂಭವನ್ನು ಬಾಗಲಕೋಟೆ ಬಿವಿವಿಎಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ಆರ್.ಜಿ. ಅಲ್ಲಾಗಿ ಉದ್ಘಾಟಿಸಲಿದ್ದಾರೆ. ಹೈದಾರಾಬಾದ್ ನ ಆಕಾಶ್ ಪ್ರಸಾದ್, ಭಟ್ಕಳ ಮುಸ್ಲಿಮ್ ಜಮಾಅತ್ ಖತರ್ ಅಧ್ಯಕ್ ಫಯ್ಯಿರ್ ಕೊಲಾ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ಸೈಯ್ಯದ್ ಅಬ್ದುಲ್ ರಹಮಾನ್ ಬಾತಿನ್ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಫೆಸ್ಟ್ ಸಂಚಾಲಕ ಫ್ರೋ. ಇಮ್ರಾನ್ ಮಾಣಿಕ್, ಪ್ರೋ. ತಾಲುತ್ ಮುಅಲ್ಲಿಮ್, ವಿದ್ಯಾರ್ಥಿ ಸಂಚಾಲಕ ನಾಸೆಹ್ ಮೊಹತೆಶಮ್ ಮತ್ತಿತರರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು