ಕಾರುಣ್ಯ ಶಾಲೆಯಲ್ಲಿ ಸನ್ಮಾನ : ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ.
Update: 2016-03-15 22:25 IST
ಕಕ್ಕಿಂಜೆ: ದಿನಾಂಕ 24.3.2016 ರಂದು ಜಿಲ್ಲಾ ಪಂಚಾಯತ್ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಶ್ರೀಮತಿ. ನಮಿತ. ಉಜಿರೆ ಕ್ಷೇತ್ರ, ಹಾಗೂ ಬೆಳ್ತಂಗಡಿ ತಾಲೂಕು ಪಂಚಾಯತ್ ಸದಸ್ಯರಾ ಶ್ರೀ .ಕೊರಗಪ್ಪ ಗೌಡ ಚಾರ್ಮಾಡಿ ಕ್ಷೇತ್ರ, ಹಾಗೂ ಶ್ರೀ ವಿ.ಟಿ ಸಬಾಸ್ಟಿನ್ ನೆರಿಯಾ ಕ್ಷೇತ್ರ ಇವರುಗಳನ್ನು ಫಲಪುಷ್ಪ ನೀಡಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಕಾರ್ಯ್ರಮವನ್ನು ಕಾರುಣ್ಯ ಶಾಲಾ ವತಿಯಿಂದ ಆಯೋಜಿಸಿ ಶಾಲಾ ಸಂಚಾಲಕ ಮಹಮ್ಮದ್.ಕೆ ಹಾಗೂ ಕಾರ್ಯದರ್ಶಿ ಡಿ.ಎ ರಹಿಮಾನ್ ನೆರವೇರಿಸಿದರು.