ಹಟ್ಟಿಯಂಗಡಿ: ಬಾಲಕಾರ್ಮಿಕನ ರಕ್ಷಣೆ
Update: 2016-03-15 23:31 IST
ಉಡುಪಿ, ಮಾ.15: ಜಿಲ್ಲಾ ಕಾರ್ಮಿಕ ಅಧಿಕಾರಿಗಳ ನಿರ್ದೇಶನದಲ್ಲಿ ಅಧಿಕಾರಿಗಳ ತಂಡವೊಂದು ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಗ್ರಾಮದ ಬಾರ್ ಆ್ಯಂಡ್ ರೆಸ್ಟೋರೆಂಟ್ ಒಂದರಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಅಪ್ಪಣ್ಣ (ಹೆಸರು ಬದಲಾಯಿಸಿದೆ) ಎಂಬ ಸುಮಾರು 13 ವರ್ಷ ವಯಸ್ಸಿನ ಬಾಲಕನನ್ನು ಪತ್ತೆ ಹಚ್ಚಿ ಆತನನ್ನು ಕೆಲಸದಿಂದ ಮುಕ್ತಗೊಳಿಸಿದೆ.
ಮಕ್ಕಳ ಕಲ್ಯಾಣ ಸಮಿತಿ ನಿಟ್ಟೂರು, ಉಡುಪಿ ಇವರ ನಿರ್ದೇಶನದ ಮೇರೆಗೆ ಕುಂದಾಪುರ ತಾಲೂಕು ಕನ್ಯಾನ ಗ್ರಾಮದಲ್ಲಿರುವ ನಮ್ಮ ಭೂಮಿ ಸಂಸ್ಥೆಗೆ ತಾತ್ಕಾಲಿಕ ಪುನರ್ವಸತಿಗಾಗಿ ದಾಖಲು ಮಾಡಲಾಗಿದೆ. ತಂಡದಲ್ಲಿ ಕುಂದಾಪುರದ ಕಾರ್ಮಿಕ ನಿರೀಕ್ಷಕ ಡಿ.ಎಸ್. ಸತ್ಯನಾರಾಯಣ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಪ್ರಭಾಕರ ಆಚಾರ್ಯ, ಬೈಂದೂರಿನ ಶಿಕ್ಷಣ ಇಲಾಖೆಯ ಕ್ಲಸ್ಟರ್ ಸಂಪನ್ಮೂಲಕ ವ್ಯಕ್ತಿ ಸುರೇಂದ್ರ ನಾಯ್ಕ, ಹಟ್ಟಿಯಂಗಡಿ ಗ್ರಾಪಂ ಪಿಡಿಓ ದಿವಾಕರ ಶ್ಯಾನುಭೋಗ್ ಇದ್ದರು ಎಂದು ಇಲಾಖೆ ಪ್ರಕಟನೆ ತಿಳಿಸಿದೆ.