‘ವಿದ್ಯಾರ್ಥಿಗಳು ತಮ್ಮ ಶಕ್ತಿ, ದೌರ್ಬಲ್ಯಗಳನ್ನು ಅರಿತುಕೊಳ್ಳಬೇಕು’
Update: 2016-03-15 23:46 IST
ಉಡುಪಿ, ಮಾ.15: ಆರೋಗ್ಯವಂತ ಯುವಜನರಿರುವ ದೇಶವೇ ಸಂಪದ್ಭರಿತ ದೇಶ. ಇಂದಿನ ಯುವಜನತೆಗೆ ತಮ್ಮ ಶಕ್ತಿಯ ಅರಿವಿಲ್ಲ. ಯುವ ಜನತೆ ತಮ್ಮ ಶಕ್ತಿ ಮತ್ತು ದೌರ್ಬಲ್ಯಗಳನ್ನು ಗುರುತಿಸಬೇಕು. ಯಾವಾಗ ನಮ್ಮ ಒಳಗಣ್ಣನ್ನು ತೆರೆದಿಡುತ್ತೇವೆಯೋ ಆಗ ಪ್ರತಿಯೊಬ್ಬರಿಂದಲೂ ನಮಗೆ ಸ್ಪೂರ್ತಿ ದೊರೆ ಯುತ್ತದೆ ಎಂದು ಖ್ಯಾತ ಮನೋವೈದ್ಯ, ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯ ಡಾ.ವಿರುಪಾಕ್ಷ ದೇವರುಮನೆ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಕಲಾ ಮತ್ತು ವಿಜ್ಞಾನ ಸಂಘಗಳು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗ ವಹಿಸಿ ಅವರು ಮಾತನಾಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಕಲಾ ಸಂಘದ ಸಂಚಾಲಕಿ ಪ್ರೊ.ಎಚ್.ಎಸ್. ಜಯಶ್ರೀ ಹಾಗೂ ವಿಜ್ಞಾನ ಸಂಘದ ಸಂಚಾಲಕಿ ಪ್ರೊ.ಉಷಾರಾಣಿ ಎಸ್.ಸುವರ್ಣ ಉಪಸ್ಥಿತರಿದ್ದರು. ಕವಿತಾ ಕಾರ್ಯಕ್ರಮ ನಿರ್ವಹಿಸಿದರು.