×
Ad

ಮಂಗಳೂರು: ಪುರಭವನದ ಎದುರಿನ ವೃತ್ತಕ್ಕೆ ಕೆ.ಎನ್.ಟೇಲರ್ ಹೆಸರಿಡಲು ಆಗ್ರಹಿಸಿ ಧರಣಿ

Update: 2016-03-16 11:53 IST

ಮಂಗಳೂರು, ಮಾ.16: ಖ್ಯಾತ ರಂಗಭೂಮಿ ಕಲಾವಿದ, ತುಳು ಚಿತ್ರನಟ ಕೆ.ಎನ್.ಟೇಲರ್ ಅವರ ಹೆಸರನ್ನು ನಗರದ ಪುರಭವನದ ಎದುರಿರುವ ವೃತ್ತಕ್ಕೆ ಇಡಬೇಕು ಹಾಗೂ ಆ ವೃತ್ತದಲ್ಲಿ ಅವರ ಪ್ರತಿಮೆ ಸ್ಥಾಪಿಸುವಂತೆ ಆಗ್ರಹಿಸಿ ತುಳುನಾಡ ರಕ್ಷಣಾ ವೇದಿಕೆ(ತುರವೇ)ಇಂದು ಮಂಗಳೂರಿನ ಪುರಭವನದ ಎದುರು ಧರಣಿ ನಡೆಸಿತು.
ಧರಣಿನಿರತರನ್ನು ಉದ್ದೇಶಿಸಿ ತುರವೇ ಸ್ಥಾಪಕಾಧ್ಯಕ್ಷ ಯೋಗಿಶ್ ಶೆಟ್ಟಿ ಜೆಪ್ಪು ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ರಾವ್ ಕಡಬ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಸಿರಾಜ್ ಅಡ್ಕರ್ ಮತ್ತಿತರರು ನೇತೃತ್ವ ವಹಿಸಿದ್ದರು.
ಧರಣಿಯ ಬಳಿಕ ಈ ಬಗ್ಗೆ ಬೇಡಿಕೆಯ ಮನವಿಯನ್ನು ಮನಪಾಕ್ಕೆ, ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News