ಮಾರ್ಚ್ 19ರಂದು ತುಳು ರಂಗಭೂಮಿಯಲ್ಲಿ ಮಹಿಳೆಯರ ಕಾರ್ಯಕ್ರಮ
ಮಂಗಳೂರು ಮಾರ್ಚ್ 16 : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸದಾನಂದ ಸುವರ್ಣ ದತ್ತಿನಿಧಿ ಯೋಜನೆಯಡಿ ತುಳುಭವನ ಉರ್ವಸ್ಟೋರ್, ಮಂಗಳೂರು ಇಲ್ಲಿನ ಸಿರಿಚಾವಡಿಯಲ್ಲಿ ಮಾರ್ಚ್ 19ರಂದು
ಅಪರಾಹ್ನ 2.30ಕ್ಕೆ ಮಹಿಳಾ ದಿನಾಚರಣೆ ಪ್ರಯುಕ್ತ ತುಳು ರಂಗಭೂಮಿಯಲ್ಲಿ ಮಹಿಳೆಯರುವಿಶೇಷ ಕಾರ್ಯಕ್ರಮ ನಡೆಯಲಿರುವುದು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಎಮ್. ಜಾನಕಿ ಬ್ರಹ್ಮಾವರ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದಶಿರ್, ಶಾಸಕಿ
ಶಕುಂತಳಾ ಟಿ. ಶೆಟ್ಟಿ, ರಂಗ ಕಲಾವಿದೆ ಶಾಲಿನಿ ಉಮೇಶ್, ರಂಗ ಕಲಾವಿದೆ ಗೀತಾ ಸುರತ್ಕಲ್, ರಾಷ್ಟ್ರಪ್ರಶಸ್ತಿ ವಿಜೇತ ರಂಗಕರ್ಮಿ ಸದಾನಂದ ಸುವರ್ಣ ಭಾಗವಹಿಸಲಿದ್ದಾರೆ. ರಂಗಭೂಮಿ ಸಾಧಕರಾದ ಚಿತ್ರಾಂಜಲಿ, ಶಾರದಾ ಬಾರ್ಕೂರು, ಆನಂದ ಶೆಟ್ಟಿ, ರೋಹಿಣಿ ಜಗರಾಂ, ಗಣೇಶ್ ಕುಮಾರ್ ಇ
ವರಿಗೆ ಚಾವಡಿ ಸನ್ಮಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಸುಧೀರ್ ರಾಜ್, ಉರ್ವ ಇವರು ರಚಿಸಿ - ನಿರ್ದೇಶಿಸಿದ ಗೆಜ್ಜೆ ಪಾತೆರ್ನಗ ಪಜ್ಜೆ ನಲ್ತ್‌ಂಡ್ ಕಿರು ನಾಟಕ ಪ್ರದರ್ಶನ ನಡೆಯಲಿದೆ. ಸಾಹಿತ್ಯಾಭಿಮಾನಿಗಳು, ನಾಟಕಪ್ರಿಯರು ಈ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ. ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.