×
Ad

ಗುರುವಾಯೂರು ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿನಲ್ಲಿ ಯುವತಿಯ ಅತ್ಯಾಚಾರ ಯತ್ನ

Update: 2016-03-16 18:27 IST

         ತೃಶೂರ್, ಮಾರ್ಚ್.16: ರೈಲ್ವೆ ಸ್ಟೇಶನ್‌ನಲ್ಲಿ ನಿಲ್ಲಿಸಿದ್ದ ಪ್ಯಾಸೆಂಜರ್ ರೈಲಿನಲ್ಲಿ ಕುಳಿತು ರೈಲು ಹೊರಡುವುದನ್ನು ಕಾಯುತ್ತಿದ್ದ ಯುವತಿಯೊಬ್ಬಳನ್ನು ಶುಚೀಕರಣ ಕೋಣೆಗೆ ಎತ್ತೊಯ್ದು ಮಾನಭಂಗ ನಡೆಸಲು ಯತ್ನಿಸಿದ ಯುವಕನೊಬ್ಬನ್ನು ಪ್ರಯಾಣಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೇರಳದಿಂದ ವರದಿಯಾಗಿದೆ. ಕೊಡಂಙಲ್ಲೂರಿಗೆ ಚಂದಪುರ ಚಿಟ್ಟೆತ್ತು ಮನೆಯ ವಿನಯನ್(45) ಎಂದು ಆರೋಪಿಯನ್ನು ಗುರುತಿಸಲಾಗಿದೆ. ನಿನ್ನೆ 12:30ಕ್ಕೆ ಗುರುವಾಯೂರು ರೈಲು ಸ್ಟೇಶನ್‌ನಲ್ಲಿ ನಿಲ್ಲಿಸಿದ್ದ ಎರ್ನಾಕುಲಂ-ಗುರುವಾಯೂರು ಪ್ಯಾಸೆಂಜರ್ ರೈಲಿನಲ್ಲಿ ಈ ಘಟನೆ ನಡೆದಿತ್ತು. ಯುವತಿ ಗುರವಾಯೂರು ಸ್ಟೇಶನ್‌ನಲ್ಲಿ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ ಯುವತಿ ಅಲ್ಲಿಂದ ಮನೆಗೆ ಮರಳಲಿಕ್ಕಾಗಿ  ಎರ್ನಾಕುಲಂ- ಗುರುವಾಯೂರು ಪ್ಯಾಸೆಂಜರ್ ರೈಲಿಗೆ ಹತ್ತಿ ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿ ಕುಳಿತಿದ್ದಳು. ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿ ಯುವತಿಯೊಬ್ಬಳೇ ಕುಳಿತಿದ್ದುದನ್ನು ನೋಡಿ ವಿನಯನ್ ಅತ್ಯಾಚಾರ ನಡೆಸಲು ಹೊಂಚು ಹಾಕಿದ್ದ. ರೈಲು ಸಮಯ ಕೇಳುವ ನೆಪದಲ್ಲಿ ಆತ ಕಂಪಾರ್ಟ್‌ಮೆಂಟ್‌ಗೆ ಹತ್ತಿದ್ದ. ಸಮಯ ಕೇಳಿದ ಕೂಡಲೇ ಯುವತಿಯ ಬಾಯಿಗೆ ಕೈ ಒತ್ತಿಹಿಡಿದು ಕಂಪಾರ್ಟ್‌ನೊಳಗಿರುವ ಶುಚಿಕೋಣೆಯತ್ತ ಎತ್ತಿ ಕೊಂಡು ಹೋಗ ತೊಡಗಿದಾಗ ಯುವತಿ ಆತನಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿ ಬೊಬ್ಬೆ ಹೊಡೆದಳು. ಇದು ಹತ್ತಿರದ ಬೋಗಿಯಲ್ಲಿದ್ದ ಜನರಿಗೆ ಕೇಳಿಸಿತ್ತು. ಅದೃಷ್ಟಕ್ಕೆ ಅವರೆಲ್ಲರೂ ಕೂಡಲೇ ಮಹಿಳಾ ಕಂಪಾರ್ಟ್‌ಮೆಂಟಿನೊಳಕ್ಕೆ ಓಡಿ ಬಂದಿದ್ದರು. ಆರೋಪಿ ಹತ್ತಿರ ಬಂದರೆ ಯುವತಿಯನ್ನು ಕೊಂದು ಹಾಕುವೆ ಎಂದು ಬೆದರಿಸಿದಾಗ ಒಂದು ಕ್ಷಣ ಏನು ಮಾಡುವುದೆಂದು ತಿಳಿಯದೆ ಅಸಹಾಯಕರಾಗಿದ್ದರು. ಅಷ್ಟರಲ್ಲಿ ಪ್ರಯಾಣಿಕರಲ್ಲೊಬ್ಬರು ಯುವಕ ಹಿಂದಿನಿಂದ ಬಂದು ಆತನನ್ನು ಹಿಡಿದು ಯುವತಿಯನ್ನು ಪಾರು ಮಾಡಿದರು. ವಿಷಯ ತಿಳಿದು ಕರ್ತವ್ಯದಲ್ಲಿದ್ದ ಮಹಿಳಾ ಕಾನ್ಸ್‌ಟೇಬಲ್ ಓಡಿ ಬಂದಿದ್ದರು. ಎಲ್ಲರೂ ಸೇರಿ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ಆರೋಪಿಯನ್ನು ತೃಶೂರ್ ರೈಲ್ವೆ ಪೊಲೀಸರಿಗೊಪ್ಪಿಸಲಾಯಿತು.

       ಭಯದಿಂದ ಕಂಗಾಲಾಗಿದ್ದ ಯುವತಿಯ ಸಂಬಂಧಿಕರನ್ನು ಕರೆಯಿಸಿ ಅವರಜೊತೆಗೆ ಕಳುಹಿಸಿ ಕೊಡಲಾಯಿತು. ಆರೋಪಿ ವಿನಯನ್ ಕೃತ್ಯವೆಸಗುವ ಮೊದಲು ಮಹಿಳಾ ಕಂಪಾರ್ಟ್‌ಮೆಂಟ್‌ಗೆ ಹತ್ತಿದ್ದ. ಆಗ ಅಲ್ಲಿ ಚಾ ಮಾರಲು ಬರುವ ವ್ಯಕ್ತಿಯಿದ್ದು ಮಹಿಳಾಕಂಪಾರ್ಟ್‌ಮೆಂಟ್‌ಗೆ ನೀನೇಕೆ ಬಂದೆ ಎಂದು ಗದರಿಸಿದಾಗ ಆತ ಇಳಿದು ಹೋಗಿದ್ದನೆನ್ನಲಾಗಿದೆ. ದೂರದಲ್ಲಿ ನಿಂತು ಚಾ ಮಾರುವವನು ಕಂಪಾರ್ಟ್‌ನಿಂದ ಇಳಿದು  ಹೋಗುವುದನ್ನೇ ಕಾದು ಆತ ಮತ್ತೆ ಕಂಪಾರ್ಟ್‌ಗೆ ಹತ್ತಿ ಈ ಕೃತ್ಯವೆಸಗಿದ್ದಾನೆ. ಆರೋಪಿಯನ್ನು ಕೋರ್ಟಿಗೆ ಹಾಜರು ಪಡಿಸಿದಾಗ ಕೋರ್ಟ್ ಆತನಿಗೆ ರಿಮಾಂಡ್ ವಿಧಿಸಿದೆ.

ಕೇರಳ ರೈಲು ಪ್ರಯಾಣದ ವೇಳೆ ಸೌಮ್ಯ ಎಂಬ ಯುವತಿಯ ದಾರುಣ ಹತ್ಯೆ ನಡೆದಿತ್ತು. ಪ್ರಯಾಣಿಕರು ಸಮಯೋಚಿತವಾಗಿ ಮಧ್ಯಪ್ರವೇಶಿಸಿದ್ದರಿಂದ ಭಾರೀ ದುರಂತವೊಂದರಿಂದ ಯುವತಿ ಪಾರಾಗುವಂತಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News