ಖಾಸಿಂ ಉಸ್ತಾದ್ ಶಿಷ್ಯಂದಿರ ಸಮಾಲೋಚನಾ ಸಭೆ
Update: 2016-03-16 19:23 IST
ಪುತ್ತೂರು : ಮುದರ್ರಿಸರಾಗಿ ದರ್ಸ್ ಕ್ಷೇತ್ರದಲ್ಲಿ 40 ವರ್ಷಕ್ಕೂ ಹಚ್ಚು ಕಾಲ ಧಾರ್ಮಿಕ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಹಿರಿಯ ವಿದ್ವಾಂಸ ಶೈಖುನಾ ಎಂ.ಎ.ಖಾಸಿಂ ಉಸ್ತಾದ್ ರವರಿಗೆ ಪೌರ ಸನ್ಮಾನ ಹಾಗೂ ಕುಂಬಳೆ ಇಮಾಂ ಶಾಫಿ ಅಕಾಡಮಿಯ ’ಜಲ್ಸಾ’ ಸಮ್ಮೇಳನ ಮೇ ತಿಂಗಳ 4 ರಿಂದ 7 ರ ವರೆಗೆ ಕುಂಬಳೆಯಲ್ಲಿ ಜರಗಲಿದ್ದು ಅದರ ಪ್ರಚಾರಾರ್ಥ ಕರ್ನಾಟಕದ ಕಾಸಿಂ ಉಸ್ತಾದ್ ಶಿಷ್ಯಂದಿರ ಸಭೆಯು ಪುತ್ತೂರಿನಲ್ಲಿ ಜರಗಿತು. ಸಯ್ಯದ್ ಅನಸ್ ಹಾದಿ ತಂಙಳ್ ಗಂಡಿಬಾಗಿಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಎಸ್.ಬಿ.ಮುಹಮ್ಮದ್ ದಾರಿಮಿ ಪುತ್ತೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಸಮಾರಂಭದಲ್ಲಿ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಮುಫತ್ತಿಶ ಉಮರುಲ್ ಫಾರೂಕ್ ದಾರಿಮಿ, ಕೆ.ವಿ.ಅಬ್ದುಲ್ ಮಜೀದ್ ದಾರಿಮಿ ಪಾಂಡವರಕಲ್ಲು,ಅಶ್ರಫ್ ಹನೀಫಿ ಕರಾಯ, ಅಬ್ದುಲ್ ಮಜೀದ್ ನಿಝಾಮಿ ಕೊಡಂಗಾಯಿ, ಶಮೀರ್ ಫೈಝಿ ಸವಣೂರು,ಬಿ.ಕೆ.ಶಾಫಿ ಫೈಝಿ ಪರಿಯಳ್ತಡ್ಕ ಮೊದಲಾದ ಹಲವಾರು ಗಣ್ಯರು ಉಪಸ್ಥಿತರಿದ್ದರು