ಪುತ್ತೂರು ಜಾತ್ರೆಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂರನ್ನು ಆಹ್ವಾನಿಸಿದರೆ ತಪ್ಪೇನು?-ಜನಾರ್ದನ ಪೂಜಾರಿ
ಮಂಗಳೂರು.ಮಾ.16:ಪುತ್ತೂರು ಜಾತ್ರೆಗೆ ಮುಜರಾಯಿ ಇಲಾಖೆಯ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಭಾಗವಹಿಸಿದರೆ ತಪ್ಪೇನು? ದೇಶದ ಸಂವಿಧಾನದ ಆಶಯದಂತೆ ನಡೆದುಕೊಳ್ಳಿ ಎಂದು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಸುದ್ದಿಗೋಷ್ಠಿಯಲ್ಲಿಂದ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರೀಯೆ ನೀಡಿದರು.
ಹಿಂದು ,ಮುಸ್ಲಿಂ,ಕ್ರೈಸ್ತರು ಎಲ್ಲರೂ ದೇವರ ಮಕ್ಕಳೆ ಅನಗತ್ಯವಾಗಿ ಪುತ್ತೂರು ಜಾತ್ರೆಯ ವಿಚಾರದಲ್ಲಿ ಜಿಲ್ಲಾಧಿಕಾರಿಯ ಹೆಸರು ನಮೂದಿಸಿರುವುದನ್ನು ವಿವಾದ ಮಾಡುವುದು ಸರಿಯಲ್ಲ.ಜಿಲ್ಲಾಧಿಕಾರಿ ದೇವರ ಮಕ್ಕಳಲ್ಲವೇ? ಕುದ್ರೋಳಿಯಲ್ಲಿ ಖಾಸಗಿ ಆಡಳಿತ ಮಂಡಳಿಯ ದೇವಸ್ಥಾನದಲ್ಲಿ ಎಲ್ಲರಿಗೂ ಪ್ರವೇಶ ನೀಡಿದ್ದೇವೆ ಸಮಾಜದ ಎಲ್ಲಾವರ್ಗದ ಎಲ್ಲಾ ಸಮುದಾಯದ ಜನರು ಭಾಗವಹಿಸಿದ್ದಾರೆ .ಪುತ್ತೂರಿನ ಮುಜರಾಯಿ ಇಲಾಖೆಯ ದೇವಸ್ಥಾನದಲ್ಲಿ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎ.ಬಿ .ಇಬ್ರಾಹೀಂ ಭಾಗವಹಿಸಿದರೆ ದೇಶದ ಸಂವಿಧಾನಕ್ಕೆ ಮಾನ್ಯತೆ ನೀಡಿದಂತಾಗುತ್ತದೆ ಈ ಬಗ್ಗೆ ಅನಗತ್ಯವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಜನಾರ್ದನ ಪೂಜಾರಿ ತಿಳಿಸಿದರು.
ದೇಶದಲ್ಲಿ ಸಂಘ ಪರಿವಾರದವರಿಗೆ ಬೇರೆ ಕಾನೂನಿದೆಯೆ ,ಬೇರೆ ದೇವರಿದ್ದಾರೆಯೇ?.ಸಂವಿಧಾನ ದ ಆದರ್ಶವನ್ನು ಪಾಲನೆ ಮಾಡುವುದನ್ನು ಬಿಟ್ಟು ಮುಸ್ಲಿಂ,ಕ್ರೈಸ್ತ,ಜೈನ ಎಂದೆಲ್ಲಾ ದೂರ ಮಾಡುವುದು ಸರಿಯಲ್ಲ ಎಂದು ಜನಾರ್ದನ ಪೂಜಾರಿ ತಿಳಿಸಿದರು.