ಸುರತ್ಕಲ್ ಕ್ಷೇತ್ರದಲ್ಲಿ 130 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು
ಸುರತ್ಕಲ್, ಫೆ.16: 130 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎಂದು ಮಂಗಳೂರು ಉತ್ತರ ವಲಯ ಶಾಸಕ ಮೊಯ್ದಿನ್ ಬಾವಾ ಹೇಳಿದರು.
ಸುರತ್ಕಲ್‌ನ ಹೋಟೇಂದರಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೂರು ಹಂತಗಳಲ್ಲಿ ನಿಧಿ ವಿನಿಯೋಗಿಸಿಕೊಂಡು 1.80 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಕೇಂದ್ರ ಮೈದಾನಕ್ಕೆ ವರ್ಗಾಯಿಸಲಾಗುವುದು. ಮೊದಲ ಹಂತವಾಗಿ 60 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದರು.
ಎಂಆರ್‌ಪಿಎಲ್ ರಸ್ತೆ ಕಾನ-ಕಟ್ಲ ವರೆಗಿನ ನೂತನ ಚತುಷ್ಪತ ರಸ್ತೆ ನಿರ್ಮಾಣ ಮಾಡಲಾಗುವುದು. ಅಲ್ಲದೆ, ಸುರತ್ಕಲ್ ನಿಂದ ಚೊಕ್ಕಬೆಟ್ಟುವರೆಗಿನ ರಸ್ತೆಯನ್ನು ಷಟ್ಪಥ ರಸ್ತೆ ನಿರ್ಮಾಣ ಸೇರಿದಂತೆ ಸುರತ್ಕಲ್‌ನಲ್ಲಿ ನೂತನ ಮಾರುಕಟ್ಟೆ ನಿರ್ಮಾಣ. ಸುರತ್ಕಲ್ ಹಾಗೂ ಕುಂಠಿಕಾನದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದರು.
ಹಲವು ವರ್ಷಗಳಿಂದ ಪ್ರಸ್ತಾವನೆಯಲ್ಲಿದ್ದ ಮಲ್ಯಭವನದ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ಉತ್ತರಿಸಿದ ಶಾಸಕರು, ಮಲ್ಯಭವನ ನಿರ್ಮಾಣಕ್ಕೆ ಈಗಾಗಲೇ 1 ಕೋಟಿ ರೂ. ಜಿಲ್ಲಾಧಿಕಾರಿಗಳ ಕೈಸೇರಿದೆ. ಅಲ್ಲದೆ, ಆಸ್ಕರ್ ಫೆರ್ನಾಂಡಿಸ್ ಅವರ ಅನುದಾನ ಸೇರಿಸಿಕೊಂಡು ಒಟ್ಟು 1.2 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮಲ್ಯಭವನ ನಿರ್ಮಾಣ ವಾಗಲಿದೆ ಎಂದರು.
ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಗೂಂಡಾಗಿರಿ ಮತ್ತು ಬಸ್ ಮಾಲಕರಿಂದ ಹಗಲು ದರೋಡೆ ನಡೆಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಅವರು, ಗೂಂಡಾಗಿರಿ ನಡೆಯುವ ಬಗ್ಗೆ ಮಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಬಸ್ ಮಾಲಕರು ತಿಂಗಳಿಗೆ ನೀಡಬೇಕಿರುವ 5,100 ರೂ. ಬದಲಿಗೆ 2,000 ರೂ. ಮಾಡುವಂತೆ ಟೋಲ್‌ಗೇಟ್‌ನ ಮಾಲಕರಲ್ಲಿ ವಿನಂತಿಸಲಾಗುವುದು ಎಂದು ಭರವಸೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿನ ಪಧ್ಮಾವತಿ ಆಸ್ಪತ್ರೆಯ ಮುಂಭಾಗದಲ್ಲಿ ಹಾಗು ಹೋಗಿರುವ ಸರ್ವಿಸ್ ರಸ್ತೆಯನ್ನು ವಿಸ್ತರಿಸುವ ಬಗ್ಗೆ ಈಗಾಗಲೇ ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾತುಕತೆಗಳು ನಡೆಸಲಾಗಿದೆ. ಅಲ್ಲದೆ, ಸಿಟಿಲಂಚ್ ಹೋಮ್ ಬಳಿ ಸರ್ವಿಸ್ ರಸ್ತೆ ಮಾಡುವ ಬಗ್ಗೆ ಈಗಾಗಲೇ ಹೆದ್ದಾಋಇ ಪ್ರಾಧಿಕಾರಕ್ಕೆ ತಿಳಿಸಲಾಗಿದೆ. ಯಾವುದೇ ಶಿಫಾರಸ್ಸುಗಳಿಗೆ ಮಣಿಯದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮಾಜೀ ಸದಸ್ಯ ಮೆಲ್ವಿನ್ ಡಿಸೋಜಾ, ತಾ.ಪಂಚಾಯತ್ ಸದಸ್ಯ ಶೇಖರ್ ಪೂಜಾರಿ, ಹಕೀಂ ಫಾಲ್ಕನ್ ಮೊದಲಾದವರು ಉಪಸ್ಥಿತರಿದ್ದರು.