ಮಂಜೇಶ್ವರ : ಜಲನಿಧಿ ಫಲಾನುಭವಿಗಳಿಗಿಲ್ಲ ಇನ್ನೂ ತಲುಪಿಲ್ಲ ನೀರು
ಮಂಜೇಶ್ವರ: ಪೈವಳಿಕೆ ಗ್ರಾಮ ಪಂಚಾಯತ್ ಸಜಂಕಿಲ ಸಾಗುವಿನ ಜನತೆ ಕುಡಿ ನೀರು ಸಿಗದೆ ಪರಿತಪಿಸುತ್ತಿದ್ದಾರೆ. ಇಲ್ಲಿಯ ಗ್ರಾಮ ಪಂಚಾಯತ್‌ನಲ್ಲಿ ಬೇಸಗೆ ಧಗೆಗೆ ನೀರಿನ ಮೂಲಗಳು ಬತ್ತಿ ಹೋಗಿದ್ದು, ಗ್ರಾಮಸ್ಥರು ಕುಡಿಯುವ ಶುದ್ದ ನೀರು ಸಿಗದೆ ಬಹು ದೂರದಿಂದ ಕೊಡಗಳಲ್ಲಿ ನೀರು ತರುವ ದೃಶ್ಯ ಸಾಮಾನ್ಯವಾಗಿದೆ.ಗ್ರಾಮಸ್ಥರು ವರ್ಷದ ಹಿಂದೆ ಸರಕಾರದ ಮಹತ್ವಾಕಾಂಕ್ಷಿ ಕುಡಿ ನೀರು ಯೋಜನೆ ಜಲನಿಧಿಗೆ ಅರ್ಜಿಕೊಟ್ಟು ಹಣ ಪಾವತಿಸಿದ್ದರೂ ಏನೂ ಪ್ರಯೋಜನವಾದಂತಿಲ್ಲ. ಜಲನಿಧಿ ಯೋಜನೆಯ ಕಾಮಗಾರಿ ತಿಂಗಳುಗಳ ಹಿಂದಿಯೆ ಮಂದಗತಿಯಲ್ಲಿ ಸಾಗಿ ಸಂಪೂರ್ಣ ಸ್ಥಗಿತವಾಗಿದೆ.ಫಲಾನುಭವಿಗಳಿಂದ ಹಣ ಪಡೆದ ಗುತ್ತಿಗೆದಾರರು ಹಾಗೂ ಕನ್ವೇನರ್‌ಗಳು ಕಣ್ಣಿಗೆ ಕಾಣಿಸುತ್ತಿಲ್ಲವೆನ್ನುತ್ತಾರೆ ಗ್ರಾಮಸ್ಥರು.ಜಿಲ್ಲೆಯಲ್ಲಿ ಬಿಸಿಲ ತಾಪಕ್ಕೆ ಕೆರೆಕುಂಟೆ, ಹಾಗೂ ಬಾವಿಗಳು ಬತ್ತಿದ್ದು, ಹಲವು ಕಡೆಗಳಲ್ಲಿ ಪರಿಸ್ಥಿತಿ ಶೋಚನೀಚಿು ಎಂಬತ್ತಾಗಿದೆ.
ಮಂಜೇಶ್ವರ ತಾಲೂಕಿನ ಜೀವ ನದಿಗಳಲ್ಲಿ ನೀರಿನ ಹರಿವು ಕುಂಠಿತವಾಗಿದ್ದು, ಜಲನಿಧಿ ನೀರು ತಲುಪದೆ ನಾಗರಿಕರು ಸಂಕಷ್ಟಕ್ಕೀಡಾಗಿದ್ದಾರೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಇತರರಲ್ಲಿ ಅಂಗಾಲಾಚುವ ಸ್ಥಿತಿ ಇದಿರಾಗಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.