ಮಂಜೇಶ್ವರ : ಅಪಘಾತಕ್ಕೀಡಾದ ಬೈಕ್ ನಿಂದ ಮದ್ಯವಶ
ಮಂಜೇಶ್ವರ: ಅಪಘಾತಕ್ಕೀಡಾದ ಬೈಕ್ ನಲ್ಲಿ ಮದ್ಯ ಪತ್ತೆಯಾಗಿದ್ದು,ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಗಳವಾರ ಸಚಿಜೆ ಉಪ್ಪಳ ಬಳಿಯ ಹನಫಿ ಬಜಾರ್ ನಲ್ಲಿ ಅಟೋರಿಕ್ಷಾ ಹಾಗೂ ಬೈಕ್ ಡಿಕ್ಕಿಯಾಗಿ ಅಪಘಾತ ನಡೆದಿತ್ತು.ನಚಿಾಬಜಾರ್ ಕಡೆಯಿಚಿದ ಉಪ್ಪಳದತ್ತ ತೆರಳುತ್ತಿದ್ದ ಅಟೋಕ್ಕೆ ತಲಪಾಡಿ ಕಡೆಯಿಂದ ಕಾಸರಗೋಡಿನತ್ತ ಆಗಮಿಸುತ್ತಿದ್ದ ನೋಂದಾವಣೆಗೊಳ್ಳದೆ ಹೊಸ ಬೈಕ್ ಡಿಕ್ಕಿಹೊಡೆದು ಅಪಘಾತ ನಡೆದಿತ್ತು.ಮಂಜೇಶ್ವರ ಎಸ್ ಐ ಪಿ.ಪ್ರಮೋದ್ ನೇತೃತ್ವದ ಪೋಲೀಸರು ಸ್ಥಳಕ್ಕೆ ತಲಪಿ ಪರಿಶೀಲಿಸಿದಾಗ ಬೈಕ್ ನಿಂದ 750 ಮಿಲ್ಲಿಯ 6 ಬಾಟಲಿ ಕರ್ನಾಟಕ ನಿರ್ಮಿತ ಮದ್ಯ ಕಂಡುಬಂತು.ಮದ್ಯ ಸಹಿತ ಬೈಕ್ ನ್ನು ಪೋಲೀಸರು ವಶಕ್ಕೆ ತೆಗೆದುಕೊಂಡರು.ಬೈಕ್ ನಲ್ಲಿದ್ದ ಈರ್ವರು ನಾಪತ್ತೆಯಾಗಿರುವುದಾಗಿ ಪೋಲೀಸರು ತಿಳಿಸಿದ್ದಾರೆ.ಅಪಘಾತದಲ್ಲಿ ಅಟೋ ಚಾಲಕ ಅಂಬಾರು ನಿವಾಸಿ ಅಶ್ರಫ್ ಗಾಯಗೊಂಡಿದ್ದಾರೆ.ಸ್ಥಳೀಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.ಬೈಕ್ ನಲ್ಲಿದ್ದ ಆರೋಪಿಗಳ ಪತ್ತೆಗೆ ಪೋಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.