×
Ad

ಮಂಜೇಶ್ವರ : ಶಾಲಾ ಅಡುಗೆ ಕಾರ್ಮಿಕರ ಕುಟುಂಬ ಸಂಗಮ

Update: 2016-03-16 20:18 IST

    ಮಂಜೇಶ್ವರ: ನೂರಾರು ಮಕ್ಕಳ ಹಸಿವು ನೀಗಿಸಲು ಪ್ರಯತ್ನಿಸುವ ಅಡುಗೆ ಕಾರ್ಮಿಕರು ಸಾಧಾರಣ 500 ಮಕ್ಕಳವರೆಗೆ ಒಬ್ಬ ಕಾರ್ಮಿಕೆ ಕೆಲಸ ನಿರ್ವಹಿಸಬೇಕಾಗಿದೆ. ಇದಕ್ಕಾಗಿ ಇಬ್ಬರು ಕಾರ್ಮಿಕರ ಅಗತ್ಯವಿದೆ. ಅಲ್ಲದೆ ಅವರು ಇನ್ನೂ ಸರಕಾರಿ ನೌಕರರಾಗಿ ನೇಮಕಗೊಳ್ಳದಿರುವುದರಿಂದ ಸರಕಾರದ ಹಲವಾರು ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಇದರಿಂದಾಗಿ ಕಾರ್ಮಿಕರು ಮುಷ್ಕರ ನಡೆಸುವ ಅನಿವಾರ್ಯತೆ ಉಂಟಾಗಿದೆ. ಒಗ್ಗಟ್ಟಾಗಿ ಹೋರಾಟ ಮಾಡಿದರೆ ಗೆಲುವು ನಿಶ್ಚಿತ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಂಕರ ರೈ ಅಭಿಪ್ರಾಯ ವ್ಯಕ್ತಪಡಿಸಿದರು.

 ಶಾಲಾ ಅಡುಗೆ ಕಾರ್ಮಿಕರ ಉಪಜಿಲ್ಲಾ ಕುಟುಂಬ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಕಮಲಾಕ್ಷ ವಹಿಸಿದ್ದರು. ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರನ್, ಅಧ್ಯಕ್ಷೆ ಶೋಭಾ, ಸದಸ್ಯೆ ಸವಿತಾ ಕುಂಬಳೆ, ಸಿಐಟಿಯು ಏರಿಯಾ ಕಾರ್ಯದರ್ಶಿ ಚಂದಪ್ಪ ಮಾಸ್ತರ್, ಸಿಪಿಎಂ ಏರಿಯಾ ಕಾರ್ಯದರ್ಶಿ ಅಬ್ದುಲ್ ರಝಾಕ್, ಬ್ಲಾಕ್ ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ, ಟ್ರೇಡ್ ಯೂನಿಯನ್ ನೇತಾರರಾದ ಕರುಣಾಕರ ಶೆಟ್ಟಿ ಮತ್ತು ಇಬ್ರಾಹಿಂ, ರಾಮಪ್ಪ ಮಜಲ್ ಮಾತನಾಡಿದರು.

  ಸಭೆಯಲ್ಲಿ ಅಡುಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು, ತಡೆ ಹಿಡಿದ ಬೋನಸ್ ವೇತನವನ್ನು ಶೀಘ್ರವಾಗಿ ವಿತರಿಸಬೇಕು, ರಾಷ್ಟ್ರೀಯ ಐಕ್ಯ ಟ್ರೇಡ್ ಯೂನಿಯನ್‌ನನ್ನು ಬಲಪಡಿಸುವ ಬಗ್ಗೆ ಚರ್ಚಿಸಲಾಯಿತು. ಬಾಕಿ ಇರುವ ವೇತನದ ಮೊತ್ತವನ್ನು ಕೂಡಲೇ ವಿತರಿಸದಿದ್ದಲ್ಲಿ ಎಇಒ ಕಚೇರಿ ಮುತ್ತಿಗೆ ಮಾಡಲು ತೀರ್ಮಾನಿಸಲಾಯಿತು. ಅಡುಗೆ ಕೆಲಸ ಮಾಡುವ ಸಮಯದಲ್ಲಿ ಕಡ್ಡಾಯವಾಗಿ ಸಮವ್ತ್ರ ಧರಿಸಲು ತೀರ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಜಿಲ್ಲಾ ಕಾರ್ಯದರ್ಶಿ ವೇದಾವತಿ ಸ್ವಾಗತಿಸಿ, ನಳಿನಿ ಬೇಕೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News