×
Ad

ಕೋಡಿಜಾಲ್: ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್‌ನ 37ನೆ ವಾರ್ಷಿಕ ಮಹಾಸಭೆ

Update: 2016-03-16 20:27 IST

ಕೊಣಾಜೆ, ಮಾ. 16: ಕೋಡಿಜಾಲ್‌ನ ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್‌ನ 37ನೆ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ರಿಫಾಯೀ ಜುಮಾ ಮಸೀದಿ ಸಭಾಂಗಣದಲ್ಲಿ ನಡೆಯಿತು.

ಮಸೀದಿಯ ಖತೀಬ್ ಹಾಜಿ ಅಬೂಬಕರ್ ಸಖಾಫಿ ದುವಾ ನೆರವೇರಿಸಿದರು. ಸದರ್ ಮುಹಮ್ಮದ್ ಸ್ವಾಲಿಹ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಕೆ.ಎಸ್. ವಹಿಸಿದ್ದರು. ಗೌರವಾಧ್ಯಕ್ಷ ಅಬ್ದುರ್ರಹ್ಮಾನ್ ಕೆ.ಎಂ., ಉಸ್ಮಾನ್ ಕೆ.ಎಸ್., ಸೂಫಿ ಕುಂಞಿ ಕೆ.ಎಚ್., ನೌಶಾದ್ ಮತ್ತು ದಮಾಮ್ ಘಟಕದ ಪರವಾಗಿ ಅಝರ್ ಕೆ.ಎಚ್. ಅನಿಸಿಕೆಗಳನ್ನು ವ್ಯಕ್ತಪಿಡಿದರು. ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್‌ನ ಅಧ್ಯಕ್ಷ ಅಮೀರ್ ಕೋಡಿಜಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಶರೀಫ್ ಕೆ. ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಅಶ್ರಫ್.ಕೆ ಲೆಕ್ಕಪತ್ರ ಮಂಡಿಸಿದರು. ಕೆ.ಐ.ಎ. ದಮಾಮ್ ಘಟಕದ ವಾರ್ಷಿಕ ವರದಿಯನ್ನು ಸೂಫಿ ಇಬ್ರಾಹೀಂ ಕೆ.ಎಂ.ಕೆ. ವಾಚಿಸಿದರು. ಪತ್ರಿಕಾ ಕಾರ್ಯದರ್ಶಿ ರಿಯಾಝ್ ಪಾವೂರು ವಂದಿಸಿದರು.

ಇದೇ ಸಂದರ್ಭದಲ್ಲಿ ಅಸೋಸಿಯೇಶನ್‌ನ 2016-17ನೆ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.

2016-17ನೆ ಸಾಲಿನ ನೂತನ ಪದಾಧಿಕಾರಿಗಳು:-

   ಅಧ್ಯಕ್ಷ ರಾಗಿ ಅಮೀರ್ ಕೋಡಿಜಾಲ್, ಗೌರವಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಕೆ.ಎಂ., ಉಪಾಧ್ಯಕ್ಷರಾಗಿ ಹನೀಫ್.ಬಿ, ಲತೀಫ್ ಕೆ.ಎಂ., ರಝಾಕ್ ಕೆ.ಎಚ್., ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹೀಂ ಶರೀಫ್ ಕೆ., ಜತೆ ಕಾರ್ಯದರ್ಶಿಯಾಗಿ ಆಸಿಫ್ ಎರ್ಮಾಡಿ, ಶಾಝೀರ್ ಕೊಳ, ಕೋಶಾಧಿಕಾರಿಯಾಗಿ ಮುಹಮ್ಮದ್ ಅಶ್ರಫ್.ಕೆ., ಸಂಘಟನಾ ಕಾರ್ಯದರ್ಶಿಯಾಗಿ ಹಸೈನಾರ್, ಅನ್ವರ್ ಸಾದಾತ್, ನೌಶಾದ್, ಹಕೀಮ್ ವೆಲ್ಡಿಂಗ್, ಸಮಾಜ ಸೇವಾ ಕಾರ್ಯದರ್ಶಿಯಾಗಿ ಅಶ್ರಫ್.ಎಚ್., ಅಶ್ರಫ್ ಶೇಖಬ್ಬ, ಪತ್ರಿಕಾ ಕಾರ್ಯದರ್ಶಿಯಾಗಿ ರಿಯಾಝ್ ಪಾವೂರು ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿದ್ದೀಕ್ ವೈ., ಇಬ್ರಾಹೀಂ.ಕೆ.ಎಂ., ನಝೀರ್, ಅಝೀಝ್, ರಫೀಕ್.ಝೆಡ್, ಮನ್ಸೂರ್, ನಾಸೀರ್.ಕೆ.ಎಂ, ಇಮ್ತಿಯಾಝ್.ಕೆ., ಅಝೀಝ್ ಇಸ್ಮಾಯೀಲ್, ಮುನೀರ್, ಶಮೀಮ್, ಅಸ್ಫರ್ ಕೆ.ಎಚ್., ಇರ್ಶಾದ್, ಸಲ್ಮಾನ್, ಶಾಹುಲ್ ಹಮೀದ್ ಮತ್ತು ಶಂಶೀರ್.

ಸಲಹೆಗಾರರಾಗಿ ಹಾಜಿ ಅಬೂಬಕರ್ ಕೆ.ಎಸ್., ಹಾಜಿ ಉಸ್ಮಾನ್ ಕೊಳ, ಅಬ್ದುಲ್ ರಹ್ಮಾನ್ ಕೆ.ಎಸ್., ಹಾಜಿ ಮಹಮ್ಮದ್ ಕೆ.ಐ., ಹಾಜಿ ಹಸನ್ ಕುಂಞಿ ಕೆ.ಎಂ, ಉಸ್ಮಾನ್ ಕೆ.ಎಸ್, ಹಬೀಬ್ ಕೋಡಿಜಾಲ್, ಮಸೂದ್.ಕೆ ಮತ್ತು ಅಬ್ದುಲ್ಲ ಬೈಲ್ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News