ಬಸ್ -ಜೀಪು ಢಿಕ್ಕಿ: ನಾಲ್ವರಿಗೆ ಗಾಯ
Update: 2016-03-16 21:15 IST
ಉಳ್ಳಾಲ: ಮುಡಿಪು ಸಮೀಪದ ಬಾಳೆಪುಣಿ ಮುದುಂಗಾರುಜಟ್ಟೆ ಬಳಿ ಬಸ್ಸು ಮತ್ತು ಜೀಪು ಮುಖಾಮುಖಿ ಡಿಕ್ಕಿ ಹೊಡೆದು ನಾಲ್ವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಗಾಯಗೊಂಡಿರುವವರನ್ನು ಉಪ್ಪಳ ನಿವಾಸಿಗಳಾದ ಇಬ್ರಾಹಿಂ, ಮಹಮ್ಮದ್ ಹುಸೈನ್, ಉಸ್ಮಾನ್ ಸಾರಮ್ಮ ಎಂಬವರಾಗಿದ್ದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಬ್ದುಲ್ ಅಝೀರ್ ಯೇನೆಪೊಯ ಆಸ್ಪತ್ರೆಯಿಂದ ಮುದುಂಗಾರುಕಟ್ಟೆಗೆ ಹೋಗುವಾಗ ಎದುರುಗಡೆಯಿಂದ ಚಾಲಕ ಗೋಪಾಲ ವಿಟ್ಲ ಸಾಲೆತ್ತೂರು ಕಡೆಯಿಂದ ಉಪ್ಪಳದ ಅಬ್ದುಲ್ ಅಝೀರ್ ಅವರ ಜೀಪಿನಲ್ಲಿ ಮುಡಿಪು ಕಡೆಯಿಂದ ಪಾತೂರು ಸಮೀಪದ ಮುದುಂಗಾರುಕಟ್ಟೆ ಮಾರ್ಗವಾಗಿ ಸಂಚರಿಸುತ್ತಿದ್ದಾಗ ಸಾಲೆತ್ತೂರು ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸು ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ನಾಲ್ವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.