×
Ad

ಕ್ಲಾಕ್ ಟವರ್ ವೃತ್ತಕ್ಕೆ ಕೆ.ಎನ್ ಟೇಲರ್ ಹೆಸರನ್ನಿಡಲು ಆಗ್ರಹ:ತುರವೇ ಪ್ರತಿಭಟನೆ

Update: 2016-03-16 21:56 IST

ಮಂಗಳೂರು, ಮಾ. 16:ನಗರದ ಪುರಭವನದ ಎದುರಿನಲ್ಲಿರುವ ಕ್ಲಾಕ್ ಟವರ್ ವೃತ್ತಕ್ಕೆ ತುಳು ಚಲನಚಿತ್ರ ನಟ ಕೆ.ಎನ್ ಟೇಲರ್ ಹೆಸರನ್ನಿಡುವಂತೆ ಮತ್ತು ವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಇಂದು ತುಳುನಾಡ ರಕ್ಷಣಾ ವೇದಿಕೆಯಿಂದ ಪುರಭವನದ ಎದುರು ಇರುವ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.  ಪ್ರತಿಭಟನೆಯಲ್ಲಿ ಕೆ.ಎನ್.ಟೇಲರ್ ಭಾವಚಿತ್ರವನ್ನು ಅನಾವರಣ ಮಾಡಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗಿಶ್ ಶೆಟ್ಟಿ ಜೆಪ್ಪು ಕನ್ನಡ ಚಿತ್ರರಂಗದ ನಾಯಕರ ಹೆಸರಿನಲ್ಲಿ ಈಗಾಗಲೆ ಹಲವೆಡೆ ಸ್ಮಾರಕ ನಿರ್ಮಾಣವಾಗಿದೆ. ಪುರಭವನದ ಎದುರು ಇರುವ ವೃತ್ತಕ್ಕೆ ತುಳು ಚಿತ್ರರಂಗದಲ್ಲಿ ಸಾಧನೆ ಮಾಡಿದ ಕೆ.ಎನ್.ಟೇಲರ್ ಅವರ ಹೆಸರನ್ನಿಡುವಂತೆ ಆಗ್ರಹಿಸಿದರೂ ಮನಪಾ, ಸರಕಾರ ಈಡೇರಿಸಿಲ್ಲ. ಅವರಿಗೆ ಗೌರವವಾಗಿ ಈ ವೃತ್ತಕ್ಕೆ ಕೆ.ಎನ್.ಟೇಲರ್ ಹೆಸರಿಡಬೇಕು ಮತ್ತು ವೃತ್ತದಲ್ಲಿ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು.

 ಪ್ರತಿಭಟನೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಪ್ರ.ಕಾರ್ಯದರ್ಶಿ ಪ್ರಶಾಂತ್ ರಾವ್ ಕಡಬ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಸಿರಾಜ್ ಅಡ್ಕರೆ , ದ.ಕ ಜಿಲ್ಲಾ ಟೈಲರ್ ಅಸೋಷಿಯೇಶನ್ ಮುಖಂಡ ಜಯಶೀಲ, ರಂಗಭೂಮಿ ನಟ ಸೀತಾರಾಮ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News