×
Ad

ದಾರಿತಪ್ಪುತ್ತಿರುವ ಚುನಾವಣಾ ಪ್ರಚಾರ ಅಮೆರಿಕದ ವರ್ಚಸ್ಸಿಗೆ ಹಾನಿ: ಒಬಾಮ ಕಳವಳ

Update: 2016-03-16 22:02 IST

ವಾಶಿಂಗ್ಟನ್, ಮಾ.10: 2016ನೆ ಸಾಲಿನ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಯ ಆಯ್ಕೆಗಾಗಿ ನಡೆಯುತ್ತಿರುವ ಸ್ಪರ್ದೆಯು ವಿದೇಶಗಳಲ್ಲಿ ಅಮೆರಿಕದ ವರ್ಚಸ್ಸಿಗೆ ಹಾನಿಯುಂಟು ಮಾಡುವ ಸಾಧ್ಯತೆಯಿದೆಯೆಂದು ಬರಾಕ್ ಒಬಾಮ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ. ತನ್ನ ಅಧಿಕಾರಾಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಗಳಿಸಿರುವ ವರ್ಚಸ್ಸಿಗೆ, ಈ ರೀತಿಯ ಒರಟು ಚುನಾವಣಾ ಪ್ರಚಾರವು ಧಕ್ಕೆಯುಂಟು ಮಾಡುವ ಸಾಧ್ಯತೆಯಿದೆಯೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

    ತನ್ನ ಉತ್ತರಾಧಿಕಾರಿ ಸ್ಥಾನಕ್ಕೆ ನಡೆಯುವ ಸ್ಫರ್ಧೆಯು ‘‘ ಅಶ್ಲೀಲ ಹಾಗೂ ವಿಭಜನವಾದಿ’’ಯಾಗಿದೆಯೆಂದು ಒಬಾಮ ತನ್ನನ್ನು ಭೇಟಿಯಾ ವಿವಿಧ ದೇಶಗಳ ಸಾಂಸದಿಕಕರ ನಿಯೋಗಕ್ಕೆ ತಿಳಿಸಿದರು. ಚುನಾವಣಾ ಪ್ರಚಾರದಲ್ಲಿ ನಾವು ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಬಗ್ಗೆ ನಡೆಸಲಾಗುತ್ತಿರುವ ಅಶ್ಲೀಲ ಹಾಗೂ ವಿಭಜನಾತ್ಮಕವಾದ ವಾಗ್ದಾಳಿಗಳನ್ನು ಕೇಳುತ್ತಿದ್ದೇವೆ’’ ಎಂದು ಒಬಾಮ ಹೇಳಿದರು. ಅವರನ್ನು ಭೇಟಿಯಾದ ನಿಯೋಗದಲ್ಲಿ ಐಯರ್‌ಲೆಂಡ್ ಪ್ರಧಾನಿ ಎಂಡಾ ಕೆನ್ನಿ ಕೂಡಾ ಉಪಸ್ಥಿತರಿದ್ದರು.

  ‘‘ ಈ ಚುನಾವಣೆಯು ಅಮೆರಿಕದ ಧೋರಣೆಯ ಕುರಿತೂ ಆಗಿದೆ. ಚುನಾವಣಾ ಪ್ರಚಾರದಲ್ಲಿ ನಡೆಯುತ್ತಿರುವ ವಾಗ್ದಾಳಿಗಳನ್ನು ಕೇಳಿದಾಗ ಇಡೀ ಜಗತ್ತಿಗೆ ನಮ್ಮ ಬಗ್ಗೆ ಯಾವ ಭಾವನೆಗಳು ಮೂಡಬಹುದು? ಎಂದವರು ಪ್ರಶ್ನಿಸಿದರು.

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಗಳ ಪೈಕಿ ಮುಂಚೂಣಿಯಲ್ಲಿರುವ ಡೊನಾಲ್ಡ್ ಟ್ರಂಪ್ ಅವರ ಜನಾಂಗೀಯ ದ್ವೇಷದ ಭಾಷಣಗಳ ಬಗ್ಗೆ ಒಬಾಮ ಆತಂಕ ವ್ಯಕ್ತಪಡಿಸಿದರು. ‘‘ಒಬಾಮ ಆಡಳಿತದಲ್ಲಿ ಅಮೆರಿಕದ ಬಗೆಗಿನ ಜಗತ್ತಿನ ದೃಷ್ಟಿಕೋನದಲ್ಲಿ ಮಹತ್ತರವಾದ ಬದಲಾವಣೆಯಾಗಿದೆ ಎಂದು ಪಿಇಡಬ್ಲು ಸಂಶೋಧನಾ ಕೇಂದ್ರದ ನಿರ್ದೇಶಕಿ ರಿಚರ್ಡ್ ವೈಕ್ ತಿಳಿಸಿದ್ದಾರೆ.

ಮುಸ್ಲಿಮರಿಗೆ ಅಮೆರಿಕ ಭೇಟಿಗೆ ತಾತ್ಕಾಲಿಕ ನಿಷೇಧ ವಿಧಿಸಬೇಕು ಹಾಗೂ ಮೆಕ್ಸಿಕನ್ ಗಡಿಯಲ್ಲಿ ವಲಸೆಯನ್ನು ತಡೆಗಟ್ಟಲು ಬೃಹತ್ ಗೋಡೆಯನ್ನು ನಿರ್ಮಿಸುವೆನೆಂಬ ಟ್ರಂಪ್ ಹೇಳಿಕೆಗಳ ಬಗ್ಗೆ ಅಮೆರಿಕದ ನಾಗರಿಕರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

 ನಿಯೋಗದಲ್ಲಿದ್ದ ಮೆಕ್ಸಿಕನ್ ಅಧ್ಯಕ್ಷ ಎನ್ರಿಕ್ ಪೆನಾ ನಿಯೊಟೊ ಟ್ರಂಪ್‌ರ ಪ್ರಚೋದನಕಾರಿ ಹೇಳಿಕೆಗಳನ್ನು ಹಿಟ್ಲರ್ ಮುಸಲೋನಿಯ ಜನಾಂಗೀಯ ವಿರೋಧಿ ಹೋಲಿಸಿದರು. ಹಾಲಿ ಚುನಾವಣಾ ಪ್ರಚಾರದಲ್ಲಿ ವಲಸಿಗರನ್ನು ಟೀಕಿಸಿ ಟ್ರಂಪ್ ನೀಡುತ್ತಿರುವ ಹೇಳಿಕೆಗಳ ಬಗ್ಗೆ ವಿಶ್ವಸಂಸ್ಥೆಯ ನಿರಾಶ್ರಿತರಿಗಾಗಿನ ಹೈಕಮಿಶನರ್ ಫಿಲಿಪ್ಪೊ ಗ್ರಾಂಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News