ಭಯೋತ್ಪಾದನೆ ವಿರೋ ಹೋರಾಟಕ್ಕೆ ಇಸ್ಲಾಮಿಕ್ ಸೇನಾ ಮೈತ್ರಿ ಕೂಟ: ಸೌದಿ ಅರೇಬಿಯ ಪ್ರಸ್ತಾಪ
ರಿಯಾದ್,ಮಾ.16: ಭಯೋತ್ಪಾದನೆಯ ವಿರುದ್ಧ ಹೋರಾಡಲು, ಇಸ್ಲಾಮಿಕ್ ರಾಷ್ಟ್ರಗಳು ನ್ಯಾಟೊ ಮಾದರಿಯ ಸೇನಾ ಮೈತ್ರಿಕೂಟವನ್ನು ರಚಿಸುವ ಬಗ್ಗೆ ಸೌದಿ ಅರೇಬಿಯ ಬುಧವಾರ ಪ್ರಸ್ತಾಪ ಮಾಡಿದೆ. ಈ ಪ್ರಸ್ತಾಪಿತ ಸೇನಾ ಮೈತ್ರಿಕೂಟವು ಯಾವುದೇ ನಿರ್ದಿಷ್ಟ ದೇಶದ ವಿರುದ್ಧವಾಗಿರುವುದಿಲ್ಲ. ಆದರೆ ಭಯೋತ್ಪಾದನೆ ಹಾಗೂ ಐಸಿಸ್‌ನಂತಹ ಉಗ್ರಗಾಮಿ ಗುಂಪುಗಳಿಂದ ಎದುರಾಗುವ ಬೆದರಿಕೆಗಳ ವಿರುದ್ಧ ಹೋರಾಡಲಿದೆಯೆಂದು ಪಾಕ್ ಸುದ್ದಿವಾಹಿನಿ ‘ದುನಿಯಾ ನ್ಯೂಸ್’ ವರದಿ ಮಾಡಿದೆ. 34 ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಪ್ರಸ್ತಾಪಿತ ಸೇನಾ ಮೈತ್ರಿಕೂಟದ ರಚನೆ ಕುರಿತ ಕಾರ್ಯಚೌಕಟ್ಟೊಂದನ್ನು ಅಭಿವೃದ್ಧಿಪಡಿಸುವ ಹೊಣೆಗಾರಿಕೆಯನ್ನು ಪಾಕಿಸ್ತಾನಕ್ಕೆ ವಹಿಸಲಾಗಿದೆ.ಸೌದಿ ಅರೇಬಿಯದಲ್ಲಿ ಮೂರು ದಿನಗಳ ಕಾಲ ನಡೆದ ವಿವಿಧ ರಾಷ್ಟ್ರಗಳ ಬೃಹತ್ ಸೇನಾ ಕವಾಯತಿನ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪಾಕ್ ಅಧ್ಯಕ್ಷ ನವಾಝ್ ಶರ್ೀ ಹಾಗೂ ಸೇನಾ ವರಿಷ್ಠ ಜನರಲ್ ರಾಹೀಲ್ ಶರ್ೀ ಭೇಟಿ ನೀಡಿದ ಸಂದರ್ಭದಲ್ಲಿಯೇ ಈ ಪ್ರಸ್ತಾಪ ಹೊರಬಿದ್ದಿದೆ. ಭಯೋತ್ಪಾದಕ ದಾಳಿಯ ವಿರುದ್ಧ ಪೂರ್ವಸಿದ್ಧತೆಯನ್ನು ಬಲಪಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಸೇನಾ ಕವಾಯತಿನಲ್ಲಿ 21 ರಾಷ್ಟ್ರಗಳ ಸೇನಾಪಡೆಗಳು ಪಾಲ್ಗೊಂಡಿದ್ದವು.
ಆದರೆ ಈ ಸೇನಾ ಮೈತ್ರಿಕೂಟದಲ್ಲಿ ಸೌದಿ ಅರೇಬಿಯದ ವಿರೋ ಹಾಗೂ ಶಿಯಾ ಸಮುದಾಯ ಪ್ರಾಬಲ್ಯವಿರುವ ಇರಾನ್ ಕೂಡಾ ಒಳಗೊಂಡಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಇಸ್ರೇಲ್ ದೇಶವು ಸುನ್ನಿ ಅರಬ್ ರಾಷ್ಟ್ರಗಳತ್ತ ನಿಕಟಬಾಂಧವ್ಯವನ್ನು ಏರ್ಪಡಿಸಲು ಉತ್ಸುಕವಾಗಿದೆಯೆಂಬ ವರದಿಗಳ ಬೆನ್ನಲ್ಲೇ ಇಸ್ಲಾಮಿಕ್ ಸೇನಾ ಮೈತ್ರಿಕೂಟ ಸ್ಥಾಪನೆಯ ಪ್ರಸ್ತಾಪ ಪ್ರಕಟಗೊಂಡಿದೆ.