ಮಂಜೇಶ್ವರ : ವಾಮಂಜೂರು ಚೆಕ್ ಪೋಸ್ಟ್ ಬಳಿ ಅಪಘಾತ: ಯುವಕ ಮೃತ್ಯು
Update: 2016-03-16 23:06 IST
ಮಂಜೇಶ್ವರ : ಹೊಸಂಗಡಿ ವಾಮಂಜೂರು ಚೆಕ್ ಪೋಸ್ಟ್ ಬಳಿ ಮೀನು ಲಾರಿಯೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಬುಧವಾರ ಸಂಜೆ 8.30 ರ ಸುಮಾರಿಗೆ ಸಂಭವಿಸಿದೆ. ಮೃತ ಯುವಕನನ್ನು ಉದ್ಯಾವರ ಇರ್ಶಾದ್ ನಗರ ಮಸೀದಿ ಸಮೀಪದ ಶೇಕ್ ಎಂಬವರ ಪುತ್ರ ಶಹ್ ಬಾನ್ (21) ಎಂದು ಗುರುತಿಸಲಾಗಿದೆ. ಶಹ್ ಬಾನ್ ಚಲಾಯಿಸುತ್ತಿದ್ದ ಸ್ಕೂಟರ್ ಗೆ ವಾಮಂಜೂರು ಚೆಕ್ ಪೋಸ್ಟ್ ಬಳಿ ತಪಾಸಣೆಗೆಂದು ನಿಲ್ಲಿಸಿದ್ದ ಮೀನು ಲಾರಿಯೊಂದು ದಿಡೀರ್ ಚಲಾಯಿಸಿರುವುದರಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದ ಶಹ್ ಬಾನ್ ಸ್ಠಳದಲ್ಲೇ ಮೃತಪಟ್ಟಿದ್ದನೆನ್ನಲಾಗಿದೆ. ಮೃತದೇಹವನ್ನು ಮಂಗಲ್ಪಾಡಿ ಸಿ.ಎಚ್ಚ್ ಸಿ. ಶವಾಗಾರದಲ್ಲಿರಿಸಲಾಗಿದೆ.
ರಸ್ತೆ ತಡೆ : ನಿರಂತರ ಅಪಘಾತ ನಡೆಯುತ್ತಿದ್ದರೂ ಅಗತ್ಯ ಕ್ರಮ ಕೈಗೊಳ್ಳದ ಆಡಳಿತ ಅಧಿಕಾರಿ ವರ್ಗದ ನಿರ್ಲಕ್ಷ್ಯವನ್ನು ಪ್ರತಿಭಟಿಸಿ ನಾಗರಿಕರು ಹೆದ್ದಾರಿಯನ್ನು ಕೆಲವು ತಾಸುಗಳ ಕಾಲ ತಡೆದ ಘಟನೆಯೂ ನಡೆದಿದೆ.