×
Ad

ಉತ್ತರ ಪ್ರದೇಶದಲ್ಲಿ ತಕ್ಷಣ ಚುನಾವಣೆ : ನಡೆದರೆ ಬಿಎಸ್‌ಪಿಗೆ ಭರ್ಜರಿ ಜಯ!

Update: 2016-03-16 23:19 IST

ಹೊಸದಿಲ್ಲಿ, ಮಾರ್ಚ್ 16: ಉತ್ತರ ಪ್ರದೇಶದಲ್ಲಿ ತಕ್ಷಣ ವಿಧಾನಸಭಾ ಚುನಾವಣೆಯೇನಾದರೂ ನಡೆದಲ್ಲಿ, ಮಾಯಾವತಿ ನೇತೃತ್ವದ ಬಿಎಸ್‌ಪಿ ಭರ್ಜರಿ ಬಹುಮತ ಸಾಧಿಸಲಿದೆ ಎನ್ನುವುದು ಸಮೀಕ್ಷೆವೊಂದರಿಂದ ಹೊರಬಿದ್ದಿದೆ.

  ಎಪಿಬಿ ನ್ಯೂಸ್ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, ತಕ್ಷಣ ಚುನಾವಣೆ ನಡೆದರೆ ಮಾಯಾವತಿ ನೇತೃತ್ವದ ಪಕ್ಷ ಅಧಿಕಾರ ಹಿಡಿಯಲಿದೆ. ಸಮೀಕ್ಷೆ ಹೇಳುವಂತೆ, ಚುನಾವಣೆ ನಡೆದರೆ 403 ಸ್ಥಾನಗಳಲ್ಲಿ 185 ಸ್ಥಾನಗಳನ್ನು ಬಿಎಸ್‌ಪಿ ಬಾಚಿಕೊಳ್ಳಲಿದೆಯಂತೆ. 2012ರ ಚುನಾವಣೆಯಲ್ಲಿ ಬಿಎಸ್‌ಪಿಯು 80 ಸ್ಥಾನಕ್ಕೆ ಕುಸಿದಿತ್ತು. ಇದೀಗ ನಡೆದಿರುವ ಸಮೀಕ್ಷೆ ಆಡಳಿತ ಪಕ್ಷವಾಗಿರುವ ಎಸ್‌ಪಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಸಮೀಕ್ಷೆಯ ಪ್ರಕಾರ ಮುಲಾಯಂ ಸಿಂಗ್ ಯಾದವ್ ಅವರ ನೇತೃತ್ವದ ಸಮಾಜವಾದಿ ಪಕ್ಷ ಕೇವಲ 80 ಸ್ಥಾನಗಳನ್ನಷ್ಟೇ ಪಡೆಯಬಹುದಂತೆ. ಬಿಜೆಪಿಯು ತನ್ನ ಮಿತ್ರಪಕ್ಷಗಳ ಸಹಾಯದಿಂದ 73 ಸ್ಥಾನಗಳನ್ನು ಗಳಿಸಬಹುದು ಸಮೀಕ್ಷೆ ಅಭಿಪ್ರಾಯ ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News