ಮಾಟಗಾತಿಯರೆಂಬ ಆರೋಪದಲ್ಲಿ 127 ಮಹಿಳೆಯರ ಹತ್ಯೆ
Update: 2016-03-16 23:42 IST
ಹೊಸದಿಲ್ಲಿ,ಮಾ.16: ಜಾರ್ಖಂಡ್‌ನಲ್ಲಿ 2012 ಮತ್ತು 2014ರ ನಡುವೆ ಮಾಟಗಾತಿಯರೆಂದು ಆರೋಪಿಸಿ ಒಟ್ಟು 127 ಮಹಿಳೆಯರನ್ನು ಹತ್ಯೆ ಮಾಡಲಾಗಿದೆ ಎಂದು ಸಹಾಯಕ ಗೃಹಸಚಿವ ಹರಿಭಾಯಿ ಪಾರ್ಥಿಭಾಯಿ ಚೌಧರಿ ಅವರು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕವು ಒದಗಿಸಿರುವ ಮಾಹಿತಿಯಂತೆ ರಾಜ್ಯದಲ್ಲಿ 2012ರಲ್ಲಿ 26, 2013ರಲ್ಲಿ 54 ಮತ್ತು 2014ರಲ್ಲಿ 47 ಇಂತಹ ಪ್ರಕರಣಗಳು ವರದಿಯಾಗಿವೆ ಎಂದು ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ತಿಳಿಸಿದರು.
ವಾಮಾಚಾರ ಕುರಿತಂತೆ ಜನರಲ್ಲಿಯ ಮೂಢನಂಬಿಕೆಯನ್ನು ನಿವಾರಿಸಲು ಮತ್ತು ಅವರಲ್ಲಿ ಅರಿವನ್ನು ಮೂಡಿಸಲು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಮತ್ತು ಎನ್‌ಜಿಒಗಳ ನೆರವನ್ನೂ ಪಡೆದುಕೊಳ್ಳಲಾಗುತ್ತಿದೆ ಎಂದರು.