ಉಳ್ಳಾಲ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ
Update: 2016-03-17 17:07 IST
ಉಳ್ಳಾಲ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರ್‌ನಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಅಶ್ವಿನಿ(27) ಸಾತ್ವಿ(4) ಹಾಗೂ ಸ್ವಾತಿಕ್ ಎಂದು ಹೆಸರಿಸಲಾಗಿದೆ. ಅಶ್ವಿನಿ ಅವರ ಪತಿ ಮನೆಯಲ್ಲಿದ್ದು ಪತ್ನಿ ಅಶ್ವಿನಿ ಮಾರುಕಟ್ಟೆಗೆಂದು ತನ್ನ ಪುತ್ರ ಸ್ವಾತಿಕ್ ಮತ್ತು ಪುತ್ರಿ ಸಾತ್ವಿಯವರನ್ನು ಕರಕೊಂಡು ಹೋಗಿದ್ದರು. ಆದರೆ ಮತ್ತವರು ಹಿಂತಿರುಗಿ ಬಾರದೇ ನಾಪತ್ತೆಯಾಗಿದ್ದಾರೆ ಎಂದು ಅಶ್ವಿನಿ ಅವರ ಪತಿ ಸುರೇಶ್ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.