×
Ad

ಅಮೆರಿಕದಲ್ಲಿ ಒಸಾಮನ ಹುತಾತ್ಮ ದಿನಾಚರಿಸಿದರೂ ನಾವು ವಿರೋಧಿಸುವುದಿಲ್ಲ

Update: 2016-03-17 17:14 IST

  ಹೊಸದಿಲ್ಲಿ, ಮಾರ್ಚ್.17: ಸಚಿವ ವೆಂಕಯ್ಯನಾಯ್ಡು ಇತ್ತೀಚೆಗೆ ಸಂಸತ್ತಿನಲ್ಲಿ ಅಮೆರಿಕದ ಯಾವುದಾದರೂ ಯುನಿವರ್ಸಿಟಿ ಒಸಾಮಾ ಬಿನ್ ಲಾದೆನ್‌ರ ಪುಣ್ಯತಿಥಿಯನ್ನು ಆಚರಿಸಲು ಅನುಮತಿ ನೀಡೀತೇ ಎಂದು ಪ್ರಶ್ನಿಸಿದ್ದರು. ಈಗ ಅಮೆರಿಕದ ಯುನಿವರ್ಸಿಟಿ ಅಧ್ಯಕ್ಷರೊಬ್ಬರು ವೆಂಕಯ್ಯರಿಗೆ ಉತ್ತರ ನೀಡಿದ್ದಾರೆ. ಅಮೆರಿಕದ ಪ್ರಿನ್ಸನ್ ಯುನಿವರ್ಸಿಟಿ ಅಧ್ಯಕ್ಷ ಕ್ರಿಸ್ಟೋಫರ್ ಎಲ್ ಐಏಗರ್ಬರ್ ಒಂದು ವೇಳೆ ನಮ್ಮ ಯುನಿವರ್ಸಿಟಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದಾದದರೆ ನಾವು ಅದನ್ನು ಸಹಿಸಿಕೊಳ್ಳುತ್ತೇವೆ ಮತ್ತು ಸಹಿಸಿಕೊಳ್ಳಬೇಕಾಗಿದೆ.

 ಜನರು ಇಂತಹ ಹೇಳಿಕೆಗಳಿಂದ ತಮ್ಮ ಕೋಪವನ್ನು ಪ್ರಕಟಿಸುತ್ತಿರುತ್ತಾರೆ ಎಂದು ಹೇಳಿದ್ದಾರೆ. ಪತ್ರಿಕೆಯೊಂದರಲ್ಲಿ ವರದಿಯಾಗಿರುವ ಪ್ರಕಾರ ಪ್ರಿನ್ಸಟನ್ ಯುನಿವರ್ಸಿಟಿಯ ಜನರು ಮೂಲಭೂತ ಹಕ್ಕುಗಳನ್ನು ಅರಿತಿದ್ದಾರೆ. ಅಂತಹ ಭಾಷಣಗಳನ್ನು ಸಹಿಸಿಕೊಳ್ಳುತ್ತಾರೆ. ಇಂತಹ ಭಾಷಣಗಳನ್ನು ನೀವು ಕಾನೂನು ಪ್ರಕಾರ ಕ್ರಮಕೈಗೊಂಡು ನಿಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ಕ್ರಿಸ್ಟೋಫರ್ "ಪ್ರಿನ್ಸಟನ್ ಯುನಿವರ್ಸಿಟಿ ಅಮೆರಿಕ ಎಂಟು ಇವ್‌ಲೀಗ್ ಎಜ್ಯುಕೇಶನ್ ಸಂಸ್ಥೆಗಳಲ್ಲಿ ಒಂದಾಗಿದ್ದು ಇದರಲ್ಲಿ ನೊಬೆಲ್ ವಿಜೇತರೂ ಕಲಿತ್ತಿದ್ದಾರೆ. ಕಳೆದ ಸಾಲಿನಲ್ಲಿ ಅರ್ಥಶಾಸ್ತ್ರದ ನೊಬೆಲ್‌ನು ಆಗ್ನೆಸ್ ಡೀಟನ್ ಮತ್ತು ಭೌತಶಾಸ್ತ್ರದ ನೊಬೆಲನ್ನು ಆರ್ಥರ್ ಮೆಕ್‌ಡೊನಾಲ್ಡ್ ಗಳಿಸಿದ್ದಾರೆ" ಎಂದೂ ಹೇಳಿದ್ದಾರೆ

ಅಮೆರಿಕದ ರಾಯಭಾರಿ ರಿಚರ್ಡ್‌ವರ್ಮಾ ಎಂಬವರು ಕಳೆದ ವಾರ ಫ್ರೀ ಸ್ಪೀಚ್‌ನ್ನು ಬೆಂಬಲಿಸಿದ್ದರು. ಅರು ಪ್ರೀ ಸ್ಫೀಚ್(ವಾಕ್ ಸ್ವಾತಂತ್ರ್ಯ) ಭಾರತ ಮತ್ತು ಅಮೆರಿಕದ ಪ್ರಜಾಪ್ರಭುತ್ವದ ಹಾಲ್ ಮಾರ್ಕ್ ಆಗಿದೆ ಎಂದು ಹೇಳಿದ್ದರು. ವೆಂಕಯ್ಯನಾಯ್ಡು ಲೋಕಸಭೆಯಲ್ಲಿ ಯಾರದೆ ಹೆಸರೆತ್ತದೆ ಒಂದು ವೇಳೆ ಅಮೆರಿಕದ ಯಾವುದಾದರೂ ಯುನಿವರ್ಸಿಟಿ ಒಸಾಮ ಬಿನ್ ಲಾದೆನ್‌ರ ಹುತಾತ್ಮತೆ ದಿವಸ ಆಚರಿಸಿದರೆ ಸಹಿಸೀತೆ ಎಂದು ಪ್ರಶ್ನಿಸಿದ್ದರು. ವೆಂಕಯ್ಯ ನಾಯ್ಡುರ ಈ ಹೇಳಿಕೆಂನ್ನು ಉಲ್ಲೇಖಿಸಿ ಕ್ರಿಸ್ಟೋಫರ್ ’ಒಂದು ವೇಳೆ ನಮ್ಮ ಯುನಿವರ್ಸಿಟಿಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾದರೆ ಅನುಮತಿ ನೀಡಲಾಗುತ್ತದೆ ಮತ್ತು ಅದನ್ನು ಆಯೋಜಿಸಿದ ವಿದ್ಯಾರ್ಥಿಗಳ ವಿರುದ್ಧ ಯಾವು ಕ್ರಮ ಕೈಗೊಳ್ಳಲಾಗುವುದಿಲ್ಲ’ ಎಂದು ಉತ್ತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News