ಪುತ್ತೂರು: ಹಾವು ಕಡಿದು ಸಾವು
Update: 2016-03-17 18:21 IST
ಪುತ್ತೂರು: ವಿಷದ ಹಾವು ಕಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಗುರುವಾರ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಚನಿಲ ಎಂಬಲ್ಲಿ ನಡೆದಿದೆ. ಬಲ್ನಾಡು ಗ್ರಾಮದ ಚನಿಲ ನಿವಾಸಿ ಚನಿಯಪ್ಪ ನಾಯ್ಕ (52) ಮೃತಪಟ್ಟ ವ್ಯಕ್ತಿ. ಇವರು ತಮ್ಮ ಕೋಳಿ ಫಾರಂನಲ್ಲಿ ಗುರುವಾರ ಬೆಳಗ್ಗೆ ಕೋಳಿ ಆಹಾರದ ಗೋಣಿಚೀಲಗಳನ್ನು ಸರಿಪಡಿಸುತ್ತಿದ್ದಾಗ ಗೋಣಿ ಚೀಲದಲ್ಲಿದ್ದ ವಿಷದ ಹಾವು ಕಡಿದು ಗಂಭೀರ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಇವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ತಂದು ಪ್ರಥಮ ಚಿಕಿತ್ಸೆ ನೀಡಿ, ಅಲ್ಲಿಂದ ಮಂಗಳೂರು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಅವರು ಮೃತಪಟ್ಟಿರುತ್ತಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ