×
Ad

ಬೆಳ್ತಂಗಡಿ: ಐಪಿಎಲ್ ಮಾದರಿಯಲ್ಲಿ ವಾಲಿಬಾಲ್ ಲೀಗ್ (ಬಿವಿಎಲ್) ಪಂದ್ಯಾಟ

Update: 2016-03-17 18:55 IST

ಬೆಳ್ತಂಗಡಿ:ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಶನ್‌ ನೇತೃತ್ವದಲ್ಲಿ
ತಾಲೂಕಿನ ಆಟಗಾರರಿಗೆ ಉತ್ತಮ ಅವಕಾಶ ಒದಗಿಸುವ ನಿಟ್ಟಿನಲ್ಲಿ ಐಪಿಎಲ್ ಮಾದರಿಯಲ್ಲಿ ಬೆಳ್ತಂಗಡಿ ತಾಲೂಕು ವಾಲಿಬಾಲ್ ಲೀಗ್ (ಬಿವಿಎಲ್) ಪಂದ್ಯಾಟವನ್ನು ಆಯೋಜಿಸಲಾಗಿದೆ. ಎಂದು ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ತಿಳಿಸಿದ್ದಾರೆ. ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು.

ಈ ಪಂದ್ಯಾಟ ಮಾ.19ರಂದು ಲಾಲದ ಪ್ರಸನ್ನ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಾಟದಲ್ಲಿ ತಾಲೂಕಿನ ಆಟಗಾರರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದ್ದು 80 ಮಂದಿ ಆಟಗಾರರು ನೋಂದಾಯಿಸಿ ಭಾಗವಹಿಸುತ್ತಿದ್ದಾರೆ. ಈ 8 ತಂಡಗಳನ್ನು ರಚಿಸಲಾಗಿದ್ದು ಎಲ್ಲಾ ತಂಡಕ್ಕೂ ಪ್ರಯೋಜಕರಿದ್ದಾರೆ. ಚೀಟಿ ಎತ್ತುವ ಮೂಲಕ ಆಟಗಾರರನ್ನು ಹಂಚಿಕೆ ಮಾಡಲಾಗಿದೆ. ಮೊದಲ ಪಂದ್ಯಾಟವು ತಾಲೂಕು ವಾಲಿಬಾಲ್ ಆಶೋಷಿಯೇಷನ್‌ನ ನೇತೃತ್ವದಲ್ಲಿ ಪ್ರಸನ್ನ ಎಜುಕೇಷನ್ ಟ್ರಸ್ಟ್ ಲಾಲ ಇದರ ಸಹಯೋಗದೊಂದಿಗೆ ನಡೆಯುತ್ತಿದೆ ಎಂದು ತಿಳಿಸಿದರು. ತಂಡಗಳ ಪ್ರಾಯೋಜಕರ ವಿವರ : ವಿಜಯ ಫೆರ್ನಾಂಡಿಸ್ ಪ್ರಾಯೋಜಕತ್ವದ ವರುಣ್ ಟ್ರಾವೆಲ್ಸ್ ಬೆಳ್ತಂಗಡಿ, ರಂಜನ್ ಜಿ. ಗೌಡ ಪ್ರಾಯೊಜಕತ್ವದ ಶಿರ್ಡಿಸಾಯಿ, ನಾಗಭೂಷಣ ಮೇಲಾಂಟ ಪ್ರಾಯೋಜಕತ್ವದ ಪದ್ಮುಂಜ ಸ್ಪೈಕರ್ಸ್, ರಾಜಶೇಖರ್ ಬಿ. ಶೆಟ್ಟಿ ಪ್ರಾಯೋಜಕತ್ವದ ಕಿಂಗ್ಸ್ ಮಡಂತ್ಯಾರು, ಅಭಿನಂದನ್ ಹರೀಶ್ ಕುಮಾರ್ ವಿಶ್ವನಾಥ ಕೊಲ್ಲಾಜೆ ಪ್ರಾಯೋಜಕತ್ವದ ಕೋಟಿಚೆನ್ನಯ್ಯ, ನಾಮದೇವ ರಾವ್ ಮತ್ತು ರಾಜೇಶ್ ಪ್ರಾಯೋಜಕತ್ವದ ಯಂಗ್ ಚಾಲೆಂಜರ್ಸ್‌ ಆಂಡ್ ತ್ರಿಶೂಲ್ ಎಲೆಕ್ಟ್ರಾನಿಕ್ಸ್, ಪ್ರದೀಪ್ ಮತ್ತು ರಾಮಪ್ರಸಾದ್ ಪ್ರಾಯೋಜಕತ್ವದ ಜೈಭಜರಂಗಿ ಮರೋಡಿ, ರಾಜೇಶ್, ಜೋನ್‌ಸನ್ ಮತ್ತು ರೋಬಿನ್ ಪ್ರಾಯೋಜಕತ್ವದ ಎಸ್.ಜೆ. ಫ್ರೆಂಡ್ಸ್ ಧರ್ಮಸ್ಥಳ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದೆ. ಪಂದ್ಯಾಟದ ಉದ್ಘಾಟನೆಯನ್ನು ಮಾಜಿ ಯುವಜನ ಕ್ರೀಡಾ ಸಚಿವ ಕೆ. ಗಂಗಾಧರ ಗೌಡ ಅವರು ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ರಂಜನ್ ಜಿ. ಗೌಡರವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ವಾಲಿಬ್ ಆಶೋಷಿಯೇಷನ್ ಅಧ್ಯಕ್ಷ ಸುರೇಶ್ ಬಾಬು, ತಾಲೂಕು ಅಧ್ಯಕ್ಷ ಪುಷ್ಪರಾಜಶೆಟ್ಟಿ, ಲಾಲ ಜಿ. ಪಂ. ಅಧ್ಯಕ್ಷ ಸೌಮ್ಯಲತಾ, ತಾ. ಪಂ. ಸದಸ್ಯ ಸುಧಾಕರ್, ಲಾಲ ಗ್ರಾ. ಪಂ. ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ನ್ಯಾಯವಾದಿ ದಿನೇಶ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ. ಸಮಾರೋ ಸಮಾರಂಭದಲ್ಲಿ ವಾಲಿಬಾಲ್ ಅಸೋಷಿಯೇಷನ್ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ರಂಜನ್ ಜಿ. ಗೌಡ, ಭರತ್ ಕುಮಾರ್, ಅಭಿನಂದನ್ ಹರೀಶ್, ನಾಮದೇವ ರಾವ್, ವಿಜಯಫೆರ್ನಾಂಡಿಸ್, ರಾಜಶೇಖರ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.

ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಾಲೀಬಾಲ್ ಅಸೋಸಿಯೇಶನ್‌ನ ಕಾರ್ಯಾಧ್ಯಕ್ಷ ರಂಜನ್ ಜಿ ಗೌಡ, ಕಾರ್ಯದರ್ಶಿ ಗುರುಪ್ರಸಾದ್, ಕೋಶಾಧಿಕಾರಿ ಶಿಬಿ ಧರ್ಮಸ್ಥಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News