×
Ad

ಬೆಳ್ತಂಗಡಿ: ಎನ್.ಸಿ.ಸಿ. ನೌಕಾ ವಿಭಾಗದವರಿಂದ ವನ್ಯ ಜೀವಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸ್ವಚ್ಛ ಭಾರತ ಅಭಿಯಾನ

Update: 2016-03-17 18:58 IST

 
ಬೆಳ್ತಂಗಡಿ; ಇತ್ತೀಚೆಗೆ ಉಜಿರೆ ಶ್ರೀ ಧ.ಮಂ. ಕಾಲೇಜಿನ ಎನ್.ಸಿ.ಸಿ. ನೌಕಾ ವಿಭಾಗದವರು ಕುದುರೆಮುಖ ಅರಣ್ಯ ವಿಭಾಗದಲ್ಲಿ ಬರುವ ಬಂಡಾಜೆ ಪರಿಸರದಲ್ಲಿ ಬೆಳ್ತಂಗಡಿ ತಾಲೂಕಿನ ವನ್ಯ ಜೀವಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸ್ವಚ್ಛ ಭಾರತ ಅಭಿಯಾನವನ್ನು ನಡೆಸಿದರು. ಪ್ರತಿವರ್ಷದಂತೆಯೇ ಈ ವರ್ಷವೂ ಕೂಡಾ ವಿಶಿಷ್ಟ ಚಾರಣವನ್ನು ಕೈಗೊಳ್ಳಲಾಯಿತು. ಕಾಲೇಜಿನ ನೌಕಾ ವಿಭಾಗದ ಕೆಡೆಟ್‌ಗಳು ಈ ಆಂದೋಲನದಲ್ಲಿ ಭಾಗವಹಿಸಿದ್ದರು ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ಈ ಚಾರಣದಲ್ಲಿ ಪ್ರಥಮ ದಿನ ಬೆಟ್ಟದ ಮೇಲೆ ಹಾಗೂ ಅಲ್ಲಿನ ಸುತ್ತಮುತ್ತಲ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ನಂತರ ಹಿಂದಿರುಗಿ ಬರುವ 12 ಕಿ.ಮೀ.ಗಳ ಹಾದಿಯಲ್ಲಿ ಇದ್ದ ಪ್ಲಾಸ್ಟಿಕ್, ಬಾಟಲ್‌ಗಳು, ಪೇಪರ್‌ಗಳನ್ನು ಸ್ವಚ್ಛಗೊಳಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.ರಾತ್ರಿ ಅನೇಕ ಮನೋರಂಜನಾ ಕಾರ್ಯಕ್ರಮಗಳು, ಕ್ಯಾಂಪ್ ಫೈರ್‌ಗಳನ್ನು ನಡೆಸಿಕೊಡಲಾಯಿತು. ಕೆಡೆಟ್‌ಗಳು,  ಎನ್.ಸಿ.ಸಿ. ನೌಕಾ ವಿಭಾಗದ ಅಧಿಕಾರಿ ಡಾ. ಶ್ರೀಧರ ಭಟ್ ಪ್ರಾಧ್ಯಾಪಕ ಅಚ್ಯುತ್ ಹಾಗೂ ಎನ್.ಸಿ.ಸಿ.ಯ 40 ಕೆಡೆಟ್‌ಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News